Site icon Suddi Belthangady

ಮಾಚಾರಿನ ಶಿಕ್ಷಕ ಪಿ.ಶಿವರಾಮ ಗೌಡರಿಗೆ ಪ್ರೌಢ ಶಾಲಾ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಉಜಿರೆ: ಉಜಿರೆ ಗ್ರಾಮದ ಮಾಚಾರು ಪರಂಗಾಜೆ ದಿ.ಬಾಬು ಗೌಡ ಮತ್ತು ದಿ.ರುಕ್ಮಿಣಿ ದಂಪತಿಯ ಪುತ್ರ ಮೂಡಿಗೆರೆ ತಾಲೂಕು ಕೊಟ್ಟಿಗೆಹಾರ ಸರಕಾರಿ ಪ್ರೌಢ ಶಾಲಾ ಗಣಿತ ಶಿಕ್ಷಕ ಪಿ.ಶಿವರಾಮ ಗೌಡ ಪರಂಗಾಜೆ ಇವರು 2024-25ನೇ ಸಾಲಿನ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬದನಾಜೆ ಮತ್ತು ಉಜಿರೆ ಶ್ರೀ ಧ.ಮಂ. ಶಾಲೆಯಲ್ಲಿ, ಪ್ರೌಢ, ಪದವಿ ಪೂರ್ವ, ಪದವಿ ಶಿಕ್ಷಣವನ್ನು ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಪೂರೈಸಿ, ಚಿಕ್ಕಮಗಳೂರಿನ ಎಂ.ಎಲ್. ಎಂ.ಎನ್.ಮಹಾವಿದ್ಯಾಲಯದಲ್ಲಿ ಬಿಎಡ್, ಕುವೆಂಪು ಮಹಾ ವಿದ್ಯಾಲಯದಲ್ಲಿ ಎಂಎಸ್ ಮುಗಿಸಿ 1999ರಿಂದ 2003ರವರೆಗೆ ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಗಣಿತ ಶಿಕ್ಷಕರಾಗಿ ಸೇವೆ, ಬಳಿಕ ಮೂಡಿಗೆರೆ ಹಿರೇಬೈಲ್ ಸರಕಾರಿ ಪ್ರೌಢ ಶಾಲೆಯಲ್ಲಿ, 2010ರಿಂದ 2024ರ ವರೆಗೆ ಮೂಡಿಗೆರೆ ಸರಕಾರಿ ಪ.ಪೂ.ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ 14 ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಕೊಟ್ಟಿಗೆಹಾರ ಸರಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Exit mobile version