Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ ಹಸ್ತಾಂತರ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧರ್ಮಸ್ಥಳದ ಕೇಂಕಾನಾಜೆಯಲ್ಲಿ ವಾಸವಿರುವ ಕಮಲರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರು ಮಾಡಿರುವ ರೂ.25,000 ಸಹಾಯಧನದ ಮಂಜೂರಾತಿ ಪತ್ರವನ್ನು ಒಕ್ಕೂಟದ ಅಧ್ಯಕ್ಷೆ ಶಾಂಭವಿ ರೈಯವರು ವಿತರಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ವಲಯ ಮೇಲ್ವಿಚಾರಕ ರವೀಂದ್ರ ಬಿ, ಧರ್ಮಸ್ಥಳ ಶೌರ್ಯ ವಿಪತ್ತು ಘಟಕದ ಸದಸ್ಯೆ ಮಾಲತಿ, ಸೇವಾ ಪ್ರತಿನಿಧಿ ಕವಿತಾ ಮತ್ತು ಒಕ್ಕೂಟದ ಪದಾಧಿಕಾರಿ ವಿಜಯರವರು ಉಪಸ್ಥಿತರಿದ್ದರು.

Exit mobile version