ಉಜಿರೆ: ವಿದ್ಯಾಸಂಸ್ಥೆಗಳ ಗ್ರಂಥಾಲಯಗಳು ಜ್ಞಾನದಾಹವನ್ನು ವೃದ್ಧಿಸುವ ಕಾರ್ಯದಲ್ಲಿ ತೊಡಗಬೇಕು. ಗ್ರಂಥಾಲಯವು ಕೇವಲ ಪುಸ್ತಕ ಸಂಗ್ರಹಾಲಯವಾಗದೆ ಕಲಿಕೆಯ ಸಂಪನ್ಮೂಲ ಕೇಂದ್ರವಾಗಲಿ ಎಂದು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರರವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಆ.21ರಮದು ಆಯೋಜಿಸಿದ ಎಸ್‌ಡಿಎಂ ಶಾಲೆಗಳ ಗ್ರಂಥಪಾಲಕರ ಕಾರ್ಯಗಾರದಲ್ಲಿ ನುಡಿದರು.
ಒಳ್ಳೆಯ ಓದು ಮತ್ತು ತಿಳುವಳಿಕೆ ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ಮಾಡುತ್ತದೆ ಎಂದು ಮುಖ್ಯ ಅತಿಥಿಗಳಾದ ಎಸ್‌ಡಿಎಂ ಕ್ಷೇಮಪಾಲನಾ ಅಧಿಕಾರಿ ದನ್ಯಕುಮಾರ್‌ರವರು ಅಭಿಪ್ರಾಯ ತಿಳಿಸಿದರು.
ಪ್ರಾಂಶುಪಾಲ ಡಾ.ಅಶೋಕ್ ಕುಮಾರ್ ರವರು ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿ ಮತ್ತು ಕಾಲೇಜಿನ ಮುಖ್ಯ ಗ್ರಂಥಪಾಲಕಿ ಡಾ.ರಜತ ಪಿ ಶೆಟ್ಟಿ ಕಾರ್ಯಾಗಾರದ ಅವಲೋಕನವನ್ನು ಪ್ರಸ್ತಾಪಿಸಿದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಉಪಾನ್ಯಾಸಕಿ ಲಾರೈನ್ ವಂದಿಸಿದರು.