Site icon Suddi Belthangady

ಕುಲ ದೈವೋ ಬ್ರಹ್ಮ ಯಕ್ಷಗಾನ ನೂತನ ಪ್ರಸಂಗ ಬಿಡುಗಡೆ

ಬೆಳ್ತಂಗಡಿ : ವಿಶ್ವ ವಿಖ್ಯಾತ ಶ್ರೀ ಕ್ಷೇತ್ರ ಗೆಜ್ಜೆ ಗಿರಿ ಮಹಾತ್ಮೆಯ ಕರ್ತೃ ನಿತಿನ್ ಕುಮಾರ್ ತೆಂಕಕಾರಂದೂರು ಮತ್ತು ಯೋಗೀಶ್ ರಾವ್ ಚಿಗುರುಪಾದೆ ಪದ್ಯ ರಚನೆಯ ಕುಲ ದೈವೋ ಬ್ರಹ್ಮ ಎಂಬ ನೂತನ ಯಕ್ಷಗಾನ ಪ್ರಸಂಗ ಸೆ.1ರಂದು ಮೂಡಬಿದ್ರೆ ಕನ್ನಡ ಕಲಾ ಭವನದಲ್ಲಿ ಬಿಡುಗಡೆಗೊಂಡಿತು.

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಅಧ್ಯಕ್ಷ ಪೀತಾಂಬರ ಹೆರಾಜೆ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭುಜಬಲಿ ಬಿ., ಜಾನಪದ ವಿದ್ವಾಂಸ ಶೇಖರ್, ಮೂಡಬಿದ್ರೆ ನಗರಸಭೆ ಸದಸ್ಯ ಸುರೇಶ್ ಕೋಟ್ಯಾನ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್, ಗೆಜ್ಜೆ ಗಿರಿ ಕ್ಷೇತ್ರದ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಬೆಳ್ತಂಗಡಿ, ಅಧ್ಯಕ್ಷ ಜಯ ವಿಕ್ರಮ್, ಬಿಲ್ಲವ ಸಂಘ ಮೂಡಬಿದಿರೆಯ ಅಧ್ಯಕ್ಷ ಸುರೇಶ್ ಕೆ.ಪೂಜಾರಿ, ಇರುವೆಯಲು ಬಿಲ್ಲವ ಸಂಘದ ಅಧ್ಯಕ್ಷ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ ಕುಕ್ಕೆಡಿ, ವೇಣೂರು ಕಂಬಳ ಸಮಿತಿಯ ಅಧ್ಯಕ್ಷ ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಹೆಚ್., ವಕೀಲ ನಾಗೇಶ್ ಶೆಟ್ಟಿ, ಹಾಗೂ ಇತರ ಗಣ್ಯರ ಸಮಕ್ಷದಮದಲ್ಲಿ ಜರಗಿತು. ಯಕ್ಷಗಾನಕ್ಕೆ ಶ್ರಮಿಸಿದ ಹಿರಿಯ ಮತ್ತು ಕಿರಿಯ ಕಲಾವಿದರು ಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು.

Exit mobile version