Site icon Suddi Belthangady

ಪದ್ಮುಂಜ: ಸ.ಹಿ.ಪ್ರಾ. ಶಾಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಸಾಮಾಜಿಕ ಪರಿಶೋಧನೆ

ಪದ್ಮುಂಜ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮಗ್ರ ಶಿಕ್ಷಣ ಸಾಮಾಜಿಕ ಪರಿಶೋಧನೆ ಕಾರ್ಯಕ್ರಮ ಸೆ.2ರಂದು ಎಸ್ ಡಿ ಎಂ ಸಿ ಹಿರಿಯ ಸದಸ್ಯರಾದ ಕಾಸಿಂ ಪದ್ಮುಂಜರವರ ಅಧ್ಯಕ್ಷತೆಯಲ್ಲಿ ಜರಗಿತು.ವ್ಯವಸ್ಥಾಪಕ ರಾಜೀವ ಸಾಲಿಯಾನ್ ರವರು ಮಾತನಾಡಿ ಈಗಿನ ಶಿಕ್ಷಣ ವ್ಯವಸ್ಥೆಡಿ ಸರಕಾರ ಹಮ್ಮಿಕೊಂಡ ಯೋಜನೆಗಳು ಸರಿಯಾದ ರೀತಿಯಲ್ಲಿ ವಿನಿಯೋಗವಾಗುತ್ತಿದೆಯೇ ಗ್ರಾಮ ಪಂಚಾಯಿತಿ ಎಸ್ ಡಿ ಎಂ ಸಿ ಹಾಗೂ ಪೋಷಕರ ಜವಾಬ್ದಾರಿ ಬಗ್ಗೆ ಮಾಹಿತಿ ನೀಡಿದರು.

ಪ್ರಮಿಳಾರವರು 2022-23ನೇ ಸಾಲಿನ ವರದಿ ಮಂಡಿಸಿದರು.ಸುಲೋಚನಾರವರು ಸಹಕರಿಸಿದರು.ಪೋಷಕರು ಹಲವು ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.

ಶಾಲಾ ಕೊಠಡಿಗಳ ದುರವಸ್ಥೆ ಶೌಚಾಲಯಗಳ ದುರಸ್ತಿ, ಆವರಣಗೋಡೆ ನಿರ್ಮಾಣ, ಶಾಲೆಗೆ ಸುಣ್ಣ ಬಣ್ಣ ಹಚ್ಚುವುದು, ಶುದ್ಧ ಕುಡಿಯುವ ನೀರಿನ ಘಟಕ, ಅಲೆಮಾರಿ ನಾಯಿಗಳ ನಿರ್ಮೂಲನೆ, ಪೂರ್ಣಕಾಲಿಕ ಅಧ್ಯಾಪಕರ ನೇಮಕ, ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಅಧಿಕಾರಿಗಳ ಮುಂದೆ ವಿನಂತಿಸಿಕೊಂಡರು.

ಕೆಲವೊಂದು ಬೇಡಿಕೆಗಳನ್ನು 15ನೇ ಹಣಕಾಸಿನ ಯೋಜನೆಯಡಿ ಈಡೇರಿಸಲು ಗ್ರಾಮ ಪಂಚಾಯಿತಿಗಳಿಗೆ ಅವಕಾಶ ಇದೆ ಎಂದು ರಾಜೀವ ಸಾಲಿಯಾನ್ ರವರು ತಿಳಿಸಿದರು.

ಮುಖ್ಯ ಶಿಕ್ಷಕಿ ಕೀರ್ತಿ ಯವರು ಮಾತನಾಡಿ ಸರ್ಕಾರದ ಕೆಲವೊಂದು ಯೋಜನೆಗಳು ಪೈಸೆಯ ಲೆಕ್ಕದಲ್ಲಿ ಲೆಕ್ಕ ಕೊಡಬೇಕಾದ ಕಾರಣ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕಾದರೆ ನಾನೇ ಸ್ವತಃ ಹಣ ಕರ್ಚು ಮಾಡಬೇಕಾಗುತ್ತದೆ ಎಂದರು.ಪಂ ಸದಸ್ಯೆ ಗಾಯತ್ರಿ, ಆಶಾ ಕಾರ್ಯಕರ್ತೆ ಶಾಲಿನಿ ಸದಾಶಿವ ಶೆಟ್ಟಿ, ವಿಧ್ಯಾರ್ಥಿ ನಾಯಕ ಸಬಾಬ್, ಎಸ್ ಡಿ ಎಂ ಸಿ ಅಧ್ಯಕ್ಷ ಪುರುಷೋತ್ತಮ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಅಧ್ಯಾಪಕಿ ತೇಜಾರವರು ಸ್ವಾಗತಿಸಿ, ನಳಿನಿಯವರು ಧನ್ಯವಾದ ಸಲ್ಲಿಸಿದರು.

Exit mobile version