Site icon Suddi Belthangady

ನಿಡ್ಲೆ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆ: ಧರ್ಮಸ್ಥಳ ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

ಧರ್ಮಸ್ಥಳ: ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ನಿಡ್ಲೆ ವಲಯ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಧರ್ಮಸ್ಥಳ ಶ್ರೀ ಧ.ಮಂ.ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಪಡೆದಿರುತ್ತಾರೆ.

ಬಹುಮಾನ ಪಡೆದ ವಿದ್ಯಾರ್ಥಿಗಳು: ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶ್ರೇಯಸಿ ಎಚ್ಎಸ್ ಅಭಿನಯ ಗೀತೆ, ಶ್ರೀಕಾರ್ ಎಸ್ ಕ್ಲೇ ಮಾಡಲಿಂಗ್, ರಿಷಿಕ ಎಚ್ ಆಶುಭಾಷಣದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಹಂತಕ್ಕೆ ಆಯ್ಕೆಯಾಗಿರುತ್ತಾರೆ. ಸಂಪ್ರೀತ್ ಎ ಧಾರ್ಮಿಕ ಪಠಣ ಸಂಸ್ಕೃತ, ಗಗನ್ ನಾಯಕ್ ಭಕ್ತಿಗೀತೆ, ಅಕ್ಷರ ಹೆಚ್ಎಸ್ ಛದ್ಮ ವೇಷ, ಅನ್ವಿಯಾ ರೋಸ್ ಮ್ಯಾಥ್ಯೂ ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಅಕ್ಷರ ಕೆ ದೇಶಭಕ್ತಿ ಗೀತೆ ಹಾಗೂ ಗೌತಮ್ಯಾನ್ ಕಥೆ ಹೇಳುವ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ.

ಕಿರಿಯ ಪ್ರಾಥಮಿಕ ವಿಭಾಗದಲ್ಲಿ ವಿದ್ವತ್ ಜೈನ್ ಇಂಗ್ಲಿಷ್ ಕಂಠ ಪಾಠ, ಆರುಶ್ ಪಿ ಜೋಶಿ ಧಾರ್ಮಿಕ ಪಠಣ ಸಂಸ್ಕೃತದಲ್ಲಿ, ಪ್ರಣವ ಜೋಶಿ ಪ್ರಬಂಧ ರಚನೆ, ನಿಧಿಶ್ ಜಿ ಕೆ ಕಥೆ ಹೇಳುವುದು, ಶ್ರವಣ್ ಬಿ ಜೆ ಮಿಮಿಕ್ರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಹಂತಕ್ಕೆ ಆಯ್ಕೆಯಾಗಿರುತ್ತಾರೆ.ಸಮ್ಯಕ್ ಡಿ ಕನ್ನಡ ಕಂಠಪಾಠ ಸ್ಪರ್ಧೆ, ಹನ್ಸಿಕ ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಶ್ರಾವ್ಯ ಎಚ್ ಭಕ್ತಿ ಗೀತೆ ಹಾಗೂ ಅನ್ನಪೂರ್ಣೇಶ್ವರಿ ಕವನ ವಾಚನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ.

Exit mobile version