Site icon Suddi Belthangady

ಮಾಚಾರು: 32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಉದ್ಘಾಟನೆ

ಮಾಚಾರು: ಇಲ್ಲಿನ ಪ್ರಗತಿ ಯುವಕ ಮಂಡಲ ಮಾಚಾರು, ಪ್ರಗತಿ ಯುವತಿ ಮಂಡಲ ಮತ್ತು ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ 32ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಉದ್ಘಾಟನಾ ಸಮಾರಂಭ ಸೆ.1ರಂದು ನಡೆಯಿತು.

ಕಾರ್ಯಕ್ರಮವನ್ನು ಉಜಿರೆ ಪ್ರಗತಿ ಮಹಿಳಾ ಮಂಡಲದ ಅಧ್ಯಕ್ಷೆ ಜಯಶ್ರೀ ಪ್ರಕಾಶ್ ಗೌಡ ಮಾತನಾಡಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಯಂತಹ ಆಚರಣೆಗಳು ಮಕ್ಕಳಲ್ಲಿ ನಮ್ಮ ಸಂಸ್ಕೃತಿ,ಸಂಸ್ಕಾರವನ್ನು ಬೆಳೆಸುವ ಮೂಲಕ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿಸುತ್ತದೆ. ಮಾಚಾರಿನ ಪರಿಸರದಲ್ಲಿ ನಡೆಯುತ್ತಿರುವ ಇಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ನಮಗೆಲ್ಲಾ ಪ್ರೇರಣೆ ಎಂದರು.

ವೇದಿಕೆಯಲ್ಲಿ ಸುಜ್ಞಾನ ಹಿರಿಯ ವಿದ್ಯಾರ್ಥಿ ಸಂಘ ಬದನಾಜೆಯ ಅಧ್ಯಕ್ಷ ರಾಮಯ್ಯಗೌಡ, ಭಜನಾ ಮಂಡಳಿಯ ಕಟ್ಟಡ ಸಮಿತಿಯ ಅಧ್ಯಕ್ಷ ದಿಲೀಪ್ ನಾಯರ್, ಅರ್ಚಕ ಶಶಿಧರ ರಾವ್ ಕಟ್ಟದಬೈಲು, ಗ್ರಾ.ಪಂ.ಸದಸ್ಯ ಅನಿಲ್ ಡಿಸೋಜ,ಪ್ರಗತಿ ಯುವಕ ಮಂಡಲದ ಅಧ್ಯಕ್ಷ ಸೋಮಶೇಖರ್ ಕೆ, ಯುವತಿ ಮಂಡಲದ ಉಪಾಧ್ಯಕ್ಷೆ ದಿಶಾ ದಿಲೀಪ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ಪರ್ಧೆಯಲ್ಲಿ ವಿಜೇತ ಶಾಲಾ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ಯುವಕ ಮಂಡಲದ ಕಾರ್ಯದರ್ಶಿ,ಶಿಕ್ಷಕ ಸುರೇಶ್ ಮಾಚಾರ್ ನಿರ್ವಹಿಸಿದರು.ಸದಸ್ಯೆ ಕು.ಜೀವಿತಾ ವಂದಿಸಿದರು.

Exit mobile version