Site icon Suddi Belthangady

ಪದ್ಮುಂಜ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ- 360.99 ಕೋಟಿ ವ್ಯವಹಾರ, 1.81 ಕೋಟಿ ನಿವ್ವಳ ಲಾಭ

ಪದ್ಮುಂಜ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರರವರ ಅಧ್ಯಕ್ಷತೆಯಲ್ಲಿ ಸೆ.1ರಂದು ಸಂಘದ ಸಭಾಂಗಣದಲ್ಲಿ ಜರಗಿತು.ಸಂಘದ ಸಿಬ್ಬಂದಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಮಹಾಸಭೆಯಲ್ಲಿ ಸಂಘದ ನಿರ್ದೇಶಕರಾದ ಉದಯ ಬಿ ಕೆ ಯವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಅಶೋಕ್ ಪಿ ನಿರ್ದೇಶಕರಾದ ಉದಯ ಭಟ್.ಕೆ . ನಾರಾಯಣ ಗೌಡ, ರಾಜೀವ ರೈ ಎ ಬಿ., ವಿನಯಶ್ರೀ, ಶೀಲಾವತಿ, ಕೇಶವ, ದಿನೇಶ್ ನಾಯ್ಕ, ಪಿಜಿನ ಮುಗೇರ, ಉದಯ ಬಿ ಕೆ.ಸುದರ್ಶನ್ ಬ್ಯಾಂಕ್ ಪ್ರತಿನಿಧಿ ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ಅಶೋಕ್ ಪಿ ಯವರು ತಿಳುವಳಿಕೆ ಪತ್ರ ಓದಿ ಹೇಳಿದರು.ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಂಕಿತಾ ಬಿ ಯವರು ವಾರ್ಷಿಕ ವರದಿ ವಾಚಿಸಿದರು.ಅಧ್ಯಕ್ಷ ಭಾಷಣ ಮಾಡಿದ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ರವರು ಆಡಳಿತ ಮಂಡಳಿಯ ಸಿಬ್ಬಂದಿಗಳ ಸಹಕಾರಿಗಳ ಸಹಕಾರದಿಂದ ನಮ್ಮ ಸಂಘವು ಪ್ರಸ್ತುತ ವರ್ಷದಲ್ಲಿ 360.99 ಕೋಟಿ ವ್ಯವಹಾರ ನಡೆಸಿ 1.81 ಕೋಟಿ ನಿವ್ವಳ ಲಾಭ ಗಳಿಸಿದೆ. 5.67 ಕೋಟಿ ಪಾಲು ಬಂಡವಾಳ.35.24 ಕೋಟಿ ಠೇವಣಿ ಹೊಂದಿರುತ್ತದೆ ಎಂದರು ಇನ್ನು ಮುಂದೆಯೂ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು ತಮ್ಮೆಲ್ಲರ ಸಹಕಾರ ಕೋರುತ್ತಿದ್ದೇನೆ ಎಂದರು.

ಜಿಲ್ಲಾ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕರಾಗಿ ನೇಮಕಗೊಂಡ ಕುಶಾಲಪ್ಪ ಗೌಡ ಪೂವಾಜೆ, ಪವರ್ ಮೇನ್ ಸಂದೀಪ್ ಸೇರಿದಂತೆ ನೂರಕ್ಕೆ ನೂರು ಶೇಕಡಾ ಪಡೆದ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳನ್ನು ಗುರುತಿಸಿ ನಗದು ಸ್ಮರಣಿಕೆ ನೀಡಿ ಗೌರವಿಸಲಾಯಿತು.ನಾರಾಯಣ ಗೌಡ ರವರು ಸಾಧಕರನ್ನು ಪರಿಚಯಿಸಿದರು.ಪ್ರೀತಂ ಸಾಲಿಯಾನ್ ಮತ್ತು ಸ್ಪಂದನ್ ರವರು ಸನ್ಮಾನಿತರ ಪಟ್ಟಿ ಓದಿ ಹೇಳಿದರು. ನಿರ್ದೇಶಕ ರಾಜೀವ ರೈ ಎ ಬಿ ಯವರು ಧನ್ಯವಾದ ಸಲ್ಲಿಸಿದರು.

Exit mobile version