Site icon Suddi Belthangady

ನಾರಾವಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ- ರೂ. 229.69 ಕೋಟಿ ವ್ಯವಹಾರ, ರೂ.1.3 ಕೋಟಿ ನಿವ್ವಳ ಲಾಭ

ನಾರಾವಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎನ್.ಸುಧಾಕರ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ಸೆ.1ರಂದು ನಡೆಯಿತು.

ವೇದಿಕೆಯಲ್ಲಿ ಸಂಘದ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ಸದಾನಂದ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಶಶಿಕಾಂತ್ ಜೈನ್, ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ನಿರ್ದೇಶಕರುಗಳಾದ ವಿಠಲ ಪೂಜಾರಿ, ರಾಜೇಂದ್ರ ಕುಮಾರ್, ಜಗದೀಶ್ ಹೆಗ್ಡೆ, ಲಕ್ಷ್ಮಣ ಪೂಜಾರಿ, ಲಿಂಗಪ್ಪ ಮಲೆಕುಡಿಯ, ಹರೀಶ್ ಹೆಗ್ಡೆ, ಪೆರ್ನ, ಯಶೋದ, ಸುಜಲತಾ, ಎಸ್ ಡಿ ಸಿ ಸಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಉಪಸ್ಥಿತರಿದ್ದರು.

ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ನಿರಂಜನ್ ಅಜ್ರಿ, ನಾರಾವಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮಿತ್ರ, ರವೀಂದ್ರ ಪೂಜಾರಿ ಬಾಂದೊಟ್ಟು, ಮಹಾವೀರ ಜೈನ್, ಉದಯ ಹೆಗ್ಡೆ, ಡಿ.ಸಿ.ಸಿ. ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ಮಹೇಶ್ ಜೈನ್ ಹಾಗೂ ಸುಧೀರ್, ಸಂಘದ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

ಸಂಘದಲ್ಲಿ ಒಟ್ಟು 3357 ಸದಸ್ಯರನ್ನು ಹೊಂದಿದ್ದು 2.2,77,75,870 ಪಾಲು ಬಂಡವಾಳ ಹೊಂದಿದೆ.ಈ ಸಾಲಿನಲ್ಲಿ ಒಟ್ಟು ರೂ.24.87 ಕೋಟಿ ಠೇವಣಿ ಹೊಂದಿರುತ್ತದೆ. ರೂ 229.68ರಷ್ಟು ವಾರ್ಷಿಕ ವ್ಯವಹಾರ ನಡೆಸಿ ರೂ.1.3 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದ ಅಧ್ಯಕ್ಷರು ಸದಸ್ಯರಿಗೆ ಶೇ 12% ಡಿವಿಡೆಂಡ್ ಘೋಷಣೆ ಮಾಡಿದರು. ಕಳೆದ 5 ವರ್ಷದಲ್ಲಿ 100% ಸಾಲ ವಸೂಲಾತಿಯಾಗಿದ್ದು ಲೆಕ್ಕ ಪರಿಶೋಧನೆಯಲ್ಲಿ ಸಂಘ ‘ಎ’ ಗ್ರೇಡ್ ಪಡೆದಿದೆ ಎಂದು ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ ತಿಳಿಸಿದರು.

ಸನ್ಮಾನ ಮತ್ತು ಗೌರವಾರ್ಪಣೆ: ಸಂಘದ ಮಹಾಸಭೆಯಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಕುಶಾಲಪ್ಪ ಗೌಡ ಪೂವಾಜೆ, ಮೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಗಳಾದ ನಾರಾಯಣ, ಮೋಹನ್, ಅಜಯ್, ಅಮೋಗ್ ಇವರನ್ನು ಸನ್ಮಾನಿಸಲಾಯಿತು. ಪ್ರಗತಿಪರ ಕೃಷಿಕರಾದ ಮಹಾವೀರ ಜೈನ್, ರಾಜು ದೇವಾಡಿಗ, ಪ್ರಭಾಕರ್ , ಬುಣ್ಣು, ಚಂದ್ರ ಶೇಖರ್, ಪದ್ಮಶ್ರೀ, ಜಿನ್ನಪ್ಪ ಪೂಜಾರಿ, ರಾಜೇಶ್, ಜಾನಕಿ, ಜಯ ಮೂಲ್ಯ, ಉತ್ತಮ ಗ್ರಾಹಕರಾಗಿರುವ ಅಶೋಕ್ ಮತ್ತು ಶಶಿಕಾಂತ್, ನಾರಾವಿ ಪೇಟೆಯ ಸ್ವಚ್ಛತಾ ಪ್ರತಿನಿಧಿ ವಿಜಯ ಇವರನ್ನು ಗುರುತಿಸಿ ಗೌರವಿಸಲಾಯತು. ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್. ಶಶಿಕಾಂತ್ ಜೈನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಲೆಕ್ಕಿಗರಾದ ವನಿತಾ ವರದಿ ಮಂಡಿಸಿದರು. ಉಪಾಧ್ಯಕ್ಷ ಸದಾನಂದ ಗೌಡ ವಂದಿಸಿದರು. ಸಿಬ್ಬಂದಿಗಳಾದ ವನಿತಾ, ಶೇಖರ ಕೆ., ಮಲ್ಲಿಕಾ, ಶ್ರೇಯಾಂಸ ಕುಮಾರ್ ಮತ್ತು ಅಶೋಕ್ ಸಹಕರಿಸಿದರು. ಕಂದಾಯ ಅಧಿಕಾರಿಯವರಿಂದ ಮಾಹಿತಿ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಸಂಘದ ಅಭಿವೃದ್ಧಿಗಾಗಿ ಕರುಣಾಕರ, ರತ್ನಾಕರ ಹೆಗ್ಡೆಯವರು ಸಲಹೆ ಸೂಚನೆಗಳನ್ನು ನೀಡಿ ಚರ್ಚಿಸಿದರು.

Exit mobile version