ಸುಲ್ಕೇರಿಮೊಗ್ರು: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ಇದರ ಆಶ್ರಯದಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 10ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಜರಗುವ ಮಕ್ಕಳ ಶ್ರೀ ಕೃಷ್ಣ ವೇಷ ಸ್ಪರ್ಧೆ ಹಾಗೂ ಗ್ರಾಮಸ್ಥರಿಗೆ ನಡೆಯುವ ವಿವಿಧ ಸ್ಫರ್ದೆಗಳ ಉದ್ಘಾಟನಾ ಸಮಾರಂಭವು ನಡಿಬೆಟ್ಟು ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ಉದ್ಘಾಟನೆಯನ್ನು ಅಳದಂಗಡಿ ಗ್ರಾಮ ಪಂಚಾಯತ್. ಅಧ್ಯಕ್ಷೆ ಸರಸ್ವತಿ ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಮಹಿಷಮರ್ದಿನಿ ದೇವಸ್ಥಾನ ನಡಿಬೆಟ್ಟು ಇದರ ಆಡಳಿತ ಮೊಕ್ತೇಸರ ಎಚ್.ಎಲ್.ರಾವ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಸತೀಶ್ ದೇವಾಡಿಗ,
ಶಾಲಿನಿ ಕೇಶವ ಬಂಗೇರ, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಅಳದಂಗಡಿ, ರವಿ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರು ಅಳದಂಗಡಿ, ಶಾಂತಿ ಕಿರಣ್, ಗ್ರಾಮ ಪಂಚಾಯತ್ ಸದಸ್ಯರು ಅಳದಂಗಡಿ. ಗೀತಾ, ಮಂತುಗುಡ್ಡೆ ಅಧ್ಯಕ್ಷರು, ಎ. ಒಕ್ಕೂಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಪ್ರಕಾಶ್ ಕೊಲ್ಲಂಗೆ, ಅಧ್ಯಕ್ಷರು, ಬಿ. ಒಕ್ಕೂಟ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ರೇವತಿ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ ಸುಲ್ಕೇರಿಮೊಗ್ರು. ಶಶಿಕಲಾ, ಅಧ್ಯಕ್ಷರು, ವರಲಕ್ಷ್ಮಿ ಪೂಜಾ ಸಮಿತಿ ಸುಲ್ಕೇರಿಮೊಗ್ರು.
ಸುಲೋಚನಾ, ಸೇವಾ ಪ್ರತಿನಿಧಿ ಗ್ರಾಮ ಅಭಿವೃದ್ಧಿ ಯೋಜನೆ ಸುಲ್ಕೇರಿಮೊಗ್ರು, ಮಲ್ಲಿಕಾ, ಸದಸ್ಯರು, ಹಾಲು ಉತ್ಪಾದಕರ ಸಂಘ ಅಳದಂಗಡಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ಧನುಷ್ ಕಾಡಂಗೆ ಇವರ ಪ್ರಾರ್ಥನೆಯೊಂದಿಗೆ ಆರಂಭಸಿ, ಕುಮಾರಿ ತ್ರಿಷಾ ಸ್ವಾಗತಿಸಿ, ನಂದನ್ ಕುಮಾರ್ ಸ್ವಾಗತಿಸಿ ಧನ್ಯವಾದವಿತ್ತರು.