ನೆರಿಯ: ನೆರಿಯ ಗ್ರಾಮ ಪಂಚಾಯತ್ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷೆ ವಸಂತಿರವರ ಅಧ್ಯಕ್ಷತೆಯಲ್ಲಿ ಆ.31ರಂದು ನೆರಿಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಮಾರ್ಗದರ್ಶಕ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೇಮಚಂದ್ರ ವಹಿಸಿದ್ದರು.ಬೆಳೆ ಸಮೀಕ್ಷೆ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಸರಕಾರದ ವಿವಿಧ ಯೋಜನೆಗಳಿಗೆ ಗ್ರಾಮಸ್ಥರಿಂದ ಅರ್ಜಿಯನ್ನು ಸ್ವೀಕರಿಸಲಾಯಿತು. ಹಾಗೂ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಸಚಿತಾ ಗ್ರಾ.ಪಂ. ಸದಸ್ಯರಾದ ಆಶ್ರಫ್, ರಮೇಶ್ ಕೆ.ಎಸ್, ರೀನಾ, ಹೂವಯ್ಯ ಗೌಡ, ಕುಶಲ, ಸವಿತಾ, ಮಾಲತಿ , ಸುಮಂಗಲ, ಪಿ ಮಹಮ್ಮದ್, ದಿನೇಶ್ ಕುಮಾರ್ ಹಾಗೂ ಆಶಾಕಾರ್ಯಕರ್ತೆಯರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಜಿತ್ ಸ್ವಾಗತಿಸಿ, ಜಮಾ- ಖರ್ಚು ಬಗ್ಗೆ ತಿಳಿಸಿದರು ಹಾಗೂ ಮಧುಸೂದ ವಾರ್ಡ್ ಸಭೆಯಲ್ಲಿ ಬಂದ ಪ್ರಸ್ತಾವನೆಯನ್ನು ಓದಿ, ಮೀನಾಕ್ಷಿ ಬಂದ ಬೇಡಿಕೆಗಳನ್ನು ಓದಿದರು.