ಕೊಯ್ಯೂರು: ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆ ಆ.31ರಂದು ಆದೂರು ಪೆರಲ್ ಪಂಚದುರ್ಗಾ ಸಹಕಾರಿ ಸಭಾಭವನದಲ್ಲಿ ಸಂಘದ ಅಧ್ಯಕ್ಷ ನವೀನ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಆರ್ಥಿಕ ವರ್ಷದಲ್ಲಿ ಸಂಘವು ಒಟ್ಟು ರೂ.157 ಕೋಟಿ ವಾರ್ಷಿಕ ವ್ಯವಹಾರ ನಡೆಸಿ ನಿವ್ವಳ ರೂ.61,70,342 ಲಾಭ ಗಳಿಸಿದೆ, ಸದಸ್ಯರಿಗೆ ಶೇ.10.25 ಡಿವಿಡೆಂಟ್ ಘೋಷಣೆ ಮಾಡಲಾಯಿತು.
ಸಂಘದ ಉಪಾಧ್ಯಕ್ಷ ಸಂಜೀವ ಎಂ.ಕೆ., ಅಶೋಕ್ ಭಟ್, ಉಜ್ವಲ್ ಕುಮಾರ್, ಎನ್.ಪರಮೇಶ್ವರ ಗೌಡ, ರವೀಂದ್ರನಾಥ ಪಿ., ಪುರುಷೋತ್ತಮ, ದೀಕಯ್ಯ ಪೂಜಾರಿ, ಹೊನ್ನಪ್ಪ ಪೂಜಾರಿ, ಗುಲಾಬಿ, ರೇವತಿ, ಯುತೀಶ, ಕೇಂದ್ರ ಬ್ಯಾಂಕ್ ನಿರ್ದೇಶಕ ಸುದರ್ಶನ್ ಉಪಸ್ಥಿತರಿದ್ದರು.
ನಿರ್ದೇಶಕ ರವೀಂದ್ರನಾಥ ಪಿ. ಸ್ವಾಗತಿಸಿ, ಇನ್ನೊರ್ವ ನಿರ್ದೇಶಕ ಅಶೋಕ್ ಭಟ್ ಪ್ರಸ್ತಾವನೆಯೊಂದಿಗೆ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.
ಮಹಾ ಸಭೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿದ್ದ ನಿರಂಜನ್ ಬಾವಂತಬೆಟ್ಟು, ನವೋದಯ ಸ್ವಸಹಾಯ ಸಂಘದ ಮೇಲ್ವಿಚಾರಕ ಕೂಸಪ್ಪ ಗೌಡರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.