Site icon Suddi Belthangady

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ಪದ್ಮುಂಜ ಸ.ಪ್ರೌ.ಶಾಲೆಯ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪದ್ಮುಂಜ: ಶಾಲಾ ಶಿಕ್ಷಣ ಇಲಾಖೆ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಪದ್ಮುಂಜ ಸರಕಾರಿ ಪ್ರೌಢ ಶಾಲೆ ಇದರ ಆಶ್ರಯದಲ್ಲಿ ಆ.28ರಂದು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದ ನಡೆಯ ಪದ್ಮುಂಜ ಸ.ಪ್ರೌ.ಶಾಲೆಯಲ್ಲಿ ನಡೆಯಿತು. ಸದಾಶಿವ ಶೆಟ್ಟಿ ಜೋಗಿ ಕಾರ್ಯಕ್ರಮ ಉದ್ಘಾಟಿಸಿದರು.ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯುವರಾಜ್ ಇಂದ್ರ ಅಧ್ಯಕ್ಷತೆ ವಹಿಸಿದ್ದರು.

ಕಣಿಯೂರು ಗ್ರಾ.ಪ.ಸದಸ್ಯ ಸೀತಾರಾಮ ಮಡಿವಾಳ, ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಗಾಯತ್ರಿ ಗೋಪಾಲ ಗೌಡ, ತಾಲೂಕು ದೈಹಿಕ ಪರಿವೀಕ್ಷಣಾ ಅಧಿಕಾರಿ ಸುಜಾಯ, ಪುಂಜಾಲಕಟ್ಟೆ ವಲಯ ಕ್ರೀಡಾ ಸಂಘಟಕ ಅಜಿತ್ ಕುಮಾರ್ ಕೊಕ್ರಾಡಿ ಸಹಿತ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಬಾಲಕಿಯರ ತಂಡ ದ್ವಿತೀಯ ಸ್ಥಾನ ಗಳಿಸಿದೆ. ತಂಡದಲ್ಲಿ ಉತ್ತಮ ಹೊಡೆತಗಾರನಾಗಿ ಯಜ್ನೇಶ್, ಆಲ್ ರೌಂಡರ್ ಆಟಗಾರನಾಗಿ ನಿತಿನ್, ಆಲ್ ರೌಂಡರ್ ಆಟಗಾರ್ತಿಯಾಗಿ ತನುಶ್ರೀರವರು ವೈಯಕ್ತಿಕ ಪ್ರಶಸ್ತಿ ಪಡೆದರು‌.

ದೈಹಿಕ ಶಿಕ್ಷಕ ವಿನಯ್ ಕುಮಾರ್ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಸುಮತಿ ಪಿ.ಎನ್. ವಂದಿಸಿ, ಕನ್ನಡ ಭಾಷಾ ಶಿಕ್ಷಕಿ ಸೌಮ್ಯ ಪಿ.ಟಿ. ಕಾರ್ಯಕ್ರಮ ನಿರೂಪಿಸಿದರು.

Exit mobile version