Site icon Suddi Belthangady

ಇಂಡೋ-ನೇಪಾಳ ಅಂತರಾಷ್ಟ್ರೀಯ ಚಾಂಪಿಯನ್ ಶಿಪ್ ತ್ರೋಬಾಲ್ ಪಂದ್ಯಾಟಕ್ಕೆ ಕಣಿಯೂರಿನ ಯೂನಿತ್ ಕೆ. ಆಯ್ಕೆ

ಬೆಳ್ತಂಗಡಿ : ಇಂಡೋ ನೇಪಾಳ ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್ ತ್ರೋಬಾಲ್ ಪಂದ್ಯಾಟಕ್ಕೆ ಆಹ್ವಾನಿತ ಪುರುಷ ಮತ್ತು ಮಹಿಳಾ ಕ್ರೀಡಾ ಚಾಂಪಿಯನ್‌ಶಿಪ್ 2024ಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯದ ಎಂಸಿಎ ವಿದ್ಯಾರ್ಥಿ ಯೂನಿತ್ ಕೆ. ಆಯ್ಕೆಯಾಗಿದ್ದಾರೆ.

ಆಗಸ್ಟ್ 26ರಿಂದ ಸೆಪ್ಟೆಂಬರ್ 5ರ ತನಕ ಪೋಖಾರಾ ನೇಪಾಳ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ. ಇವರು ವಾಣಿ ಶಿಕ್ಷಣ ಸಂಸ್ಥೆಯಲ್ಲಿ 1ರಿಂದ ಪದವಿ ಪೂರ್ವದವರೆಗೆ ವಿದ್ಯಾಭ್ಯಾಸ ನಡೆಸಿದ್ದರು. ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡಿದ್ದರು.

ಇವರು ಕಣಿಯೂರು ಗ್ರಾಮದ ಕದ್ರಿ ನಿವಾಸಿ ರತ್ನ ಕೆ. ಮತ್ತು ಮಂಜುನಾಥ್ ಗೌಡ ದಂಪತಿಯ ಪುತ್ರ.

Exit mobile version