ಧರ್ಮಸ್ಥಳ: ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ, ಬಾಲಕೃಷ್ಣ, ರಾಧೆ ವೇಷ ಸ್ಪರ್ಧೆ ಮತ್ತು ಮೊಸರು ಕುಡಿಕೆ ಸ್ಪರ್ಧೆಗಳನ್ನು ಆಗಸ್ಟ್ 24ರಂದು ನಡೆಸಲಾಯಿತು.
ಸುಮಾರು 65 ವಿದ್ಯಾರ್ಥಿಗಳು ಕೃಷ್ಣನ ಬಾಲಲೀಲೆಗಳನ್ನು ಪ್ರದರ್ಶಿಸಿದರು. 5,6,7ನೇ ತರಗತಿ ಮಕ್ಕಳಿಗೆ ಮೊಸರು ಕುಡಿಕೆ ಸ್ಪರ್ಧೆ ಏರ್ಪಡಿಸಲಾಯಿತು.ಶ್ರೀ ಕ್ಷೇತ್ರ ಧರ್ಮಸ್ಥಳ ದೇವಳದ ಮಣೆಗಾರ ವಸಂತ ಭಟ್ ಅವರು ವೇಷಧಾರಿಗಳಿಗೆ ಬಹುಮಾನ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯ ವ್ಯವಸ್ಥೆಯನ್ನು ಒದಗಿಸಿರುತ್ತಾರೆ.ಈ ಕಾರ್ಯಕ್ರಮದ ತೀರ್ಪುಗಾರರಾಗಿ ಶಿಕ್ಷಕಿಯರಾದ ಶ್ರೀಜಾ ಮತ್ತು ಉಷಾ ಕುಮಾರಿ ಅವರು ಸಹಕರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕೆ.ಟಿ.ರಜಪೂತ್ ಮತ್ತು ಎಲ್ಲಾ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಶೇಖರ್ ಗೌಡ ಮತ್ತು ಪೂರ್ಣಿಮಾ ಸಂಯೋಜಿಸಿದರು. ಇತರ ಎಲ್ಲಾ ಶಿಕ್ಷಕರು ಸಹಕಾರ ನೀಡಿದರು.