ಅಳದಂಗಡಿ: ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಸಭಾ ಭವನದಲ್ಲಿ ಆ.28ರಂದು ನಡೆಯಿತು.
ಸಂಘದ ಅಧ್ಯಕ್ಷ ಪ್ರಶಾಂತ್ ವೇಗಸ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಶೋಕ್ ಪೂಜಾರಿ, ದ.ಕ. ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸುಚಿತ್ರಾ, ಪಶು ವೈದ್ಯಾಧಿಕಾರಿ ಡಾ.ಪೂಜ, ನಿರ್ದೇಶಕ ಪ್ರಸಾದ್ ಪಿಂಟೋ, ಗಣೇಶ್ ದೇವಾಡಿಗ, ಲ್ಯಾನ್ಸಿ ರೊಡ್ರಿಗಸ್, ಧರ್ಣಪ್ಪ ಪೂಜಾರಿ, ಸುಧೀರ್, ಹರೀಶ್ ಪೂಜಾರಿ, ಸುರೇಶ್ ಪೂಜಾರಿ, ಸುಂದರ, ಸುನಿಲ್, ಪುಷ್ಪಾವತಿ, ಮಲ್ಲಿಕಾ ಉಪಸ್ಥಿತರಿದ್ದರು.
ಸಂಘ ಉತ್ತಮ ಕೆಲಸ ಮಾಡ್ತ ಇದೆ. ಸಿಬ್ಬಂದಿಗಳಿಗೆ ಉತ್ತಮ ವೇತನ ನೀಡುವ ಕೆಲಸ ಆಡಳಿತ ಮಂಡಳಿ ಮಾಡ್ತ ಇದೆ. ವೇತನ ಹೆಚ್ಚು ಕೊಟ್ಟು ಸಂಘಕ್ಕೆ ನಷ್ಟ ಆಗಬಾರದೆಂಬ ಉದ್ದೇಶ ಆಡಳಿತ ಮಂಡಳಿಗಿದೆ. ಮೊದಲು 2500ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಇವಾಗ ಕಡಿಮೆಯಾಗಿ 2,000ಸಾವಿರ ಲೀಟರ್ ಮಾತ್ರ ಸಂಗ್ರಹವಾಗುತ್ತಿದೆ. ವಿವಿಧ ಯೋಜನೆಗೆ ಒಕ್ಕೂಟದಿಂದ ಅನುದಾನ ನೀಡಲಾಗುತ್ತದೆ. ಮಿನಿ ಡೈರಿ, ಸಮೃದ್ಧಿ ಯೋಜನೆ, ಹಸಿ ಹುಲ್ಲು, ಇನ್ಸೂರೆನ್ಸ್, ಲವಣ ಮಿಶ್ರಣ ಮತ್ತು ಜೋಳ ಬೆಳೆಸಿಪಶುಗಳಿಗೆ ಉತ್ತಮ ಪಶು ಹಾರ. ಇದರಿಂದ ಉತ್ತಮ ಹಾಲು ಇಳುವರಿ ಸಿಗಲು ಸಾಧ್ಯ ಎಂದು ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸುಚಿತ್ರಾ ಹೇಳಿದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಲ್ಫ್ರೆಡ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿ, ವರದಿ ಲೆಕ್ಕಪತ್ರ ಮಂಡಿಸಿದರು. ಸಂಘದಲ್ಲಿ ಒಟ್ಟು 4,23,70,964 ಕೋಟಿ ವ್ಯವಹಾರ ಮಾಡಿ 11,11,580 ಲಕ್ಷ ಲಾಭ ಗಳಿಸಿ ಸದಸ್ಯರಿಗೆ ಅಧ್ಯಕ್ಷ ಪ್ರಶಾಂತ್ ವೇಗಸ್ 65% ಬೋನಸ್ ಹಾಗೂ 25% ಡಿವಿಡೆಂಡ್ ಘೋಷಣೆ ಮಾಡಿ ವಿತರಣಾ ಚೆಕ್ ಗೆ ಸಹಿ ಮಾಡಿದರು.ಸಂಘದ ದಿಗಳಿಗೆ ವೇತನ ಪರಿಷ್ಕರಿಸುವಂತೆ ಸದಸ್ಯರು ಆಡಳಿತ ಮಂಡಳಿಯ ಗಮನಕ್ಕೆ ತಂದರು.
ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ: ಸಂಘದ ಹಿರಿಯ ಸದಸ್ಯರಾದ ಸೈಮನ್, ಶ್ರೀಧರ ಶೆಟ್ಟಿ, ಹಿಲರಿ ಡಿಸೋಜಾ, ಚಂದಪ್ಪ ಗುಡಿಗಾರ್, ರೋಸಿ ಫೆರ್ನಾಂಡಿಸ್, ಶಿವ ಭಟ್, ಫ್ಲೋರಿನ್ ಮೊಂತೇರೊ, ವಿಲ್ಸನ್ ಪಿಂಟೊ, ಉಮ್ಮಕ್ಕ, ಆನಂದ ಪೂಜಾರಿ, ಗಂಗಯ್ಯ ನಾಯ್ಕ, ಅತೀ ಹೆಚ್ಚು ಹಾಲು ಪೂರೈಸಿದ ಸಂಘದ ಸದಸ್ಯರಾದ ಮೋನಿಕಾ ಡಿ’ಸೋಜಾ ಪ್ರಥಮ ಸ್ಥಾನ , ಸತ್ಯನಾರಾಯಣ ಭಟ್ ದ್ವಿತೀಯ, ಉತ್ತಮ ಪ್ಯಾಟ್ ಹೊಂದಿರುವ ಹಾಲು ಸರಬರಾಜು ಮಾಡುವ ಡೊಗುರ, ಮೋಹಿನಿ ಇವರನ್ನು ಗೌರವಿಸಲಾಯಿತು.ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ , ಅಕ್ಷತಾ, ಅಭಿನವ್, ವೈಷ್ಣವಿ, ಶ್ರೀಲಕ್ಷ್ಮಿ, ಅಭಿಜ್ಞಾ, ಸುಜನ್, ಚಂದ್ರಶೇಖರ್, ಪಿ.ಯು.ಸಿ. ತ್ರಿಶಾ, ಜೆನೆವೀವ್, ರಿಷಿಕಾ ಶ್ರದ್ಧಾ ಡಿ , ವಿಂಬೃತ ಕರ್ಕೇರ, ಹಾಗೂ ಮೆಲ್ರಿಕ್ ಪಿರೇರಾ ಇವರಿಗೆ ವಿದ್ಯಾರ್ಥಿ ಪ್ರೋತ್ಸಾಹನಿಧಿ ವಿತರಿಸಲಾಯಿತು.