ಬೆಳಾಲು: ಬೆಳಾಲು ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ(83ವ)ರವರನ್ನು ಆ.20ರಂದು ಅವರ ಮನೆಯಲ್ಲಿ ಬರ್ಬರವಾಗಿ ಕೊಲೆ ಮಾಡಿರುವ ಆರೋಪದಲ್ಲಿ ಆ.24ರಂದು ಧರ್ಮಸ್ಥಳ ಠಾಣಾ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಕಾಸರಗೋಡು ಬದಿಯಡ್ಕದ ರಾಘವೇಂದ್ರ ಕೆದಿಲಾಯ(54ವ) ಮತ್ತು ಆತನ ಮಗ ಮುರಳಿಕೃಷ್ಣ(21ವ)ರವರನ್ನು ಆ.27ರಂದು ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಸಂಜೆ ಕೊಲೆ ನಡೆದ ಸ್ಥಳಕ್ಕೆ ಕರೆತಂದು ಮಹಜರು ನಡೆಸಲಾಯಿತು.
ಹತ್ಯೆ ನಡೆಸಿದ್ದು ಹೇಗೆ, ವಾಹನ ಎಲ್ಲಿ ನಿಲ್ಲಿಸಿ ಎಂಟ್ರಿ ಕೊಟ್ಟರು,ಆರೋಪಿಗಳ ಕೈಯಲ್ಲಿದ್ದ ಆಯುಧಗಳ ಮಾಹಿತಿ, ಮನೆಯಲ್ಲಿ ಹತ್ಯೆ ನಡೆಸಲಾದ ಸಂದರ್ಭದಲ್ಲಿ ಏನೇನಾಯ್ತು ಎಂಬ ವಿಚಾರಗಳ ಬಗ್ಗೆ ಆರೋಪಿಗಳೊಂದಿಗೆ ಸ್ಥಳ ಮಹಜರು ನಡೆಸಿದರು.ಮೃತಪಟ್ಟ ನಂತರ ಮೃತದೇಹ ಎಲ್ಲಿತ್ತು ಆ ವೇಳೆ ಯಾರ್ಯಾರು ಇದ್ದರೂ ಎಂಬಿತ್ಯಾದಿ ಮಾಹಿತಿಯನ್ನು ಪೋಲಿಸರು ಆರೋಪಿಗಳಿಂದ ಕಲೆ ಹಾಕಿದರು.
ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ಐದು ದಿನ ಪೊಲೀಸ್ ಕಸ್ಟಡಿಗೆ ನ್ಯಾಯಾಧೀಶರು ಒಪ್ಪಿಸಿದ್ದು,ತನಿಖೆ ಆರಂಭವಾಗಿದೆ.ಘಟನ ಸ್ಥಳದಲ್ಲಿ ಧರ್ಮಸ್ಥಳ ಸಬ್ ಇನ್ ಸ್ಪೆಕ್ಟರ್ ಕಿಶೋರ್, ಸಿಬ್ಬಂದಿ ಪ್ರಶಾಂತ್, ಲೋಕೇಶ್, ಗೋವಿಂದ್ ರಾಜ್, ಅಭಿಜಿತ್, ದೀಪು ಹಾಗೂ ಬೆಳ್ತಂಗಡಿ ಠಾಣೆಯ ಸಿಬ್ಬಂದಿ ವಿಜಯ್ ಕುಮಾರ್, ಚಿದಾನಂದ ಉಪಸ್ಥಿತರಿದ್ದರು.