Site icon Suddi Belthangady

ಮೊಗ್ರು: ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ರಾಮ ಶಿಶು ಮಂದಿರ ಅಲೆಕ್ಕಿ-ಮುಗೇರಡ್ಕ ಆಶ್ರಯದಲ್ಲಿ 3ನೇ ವರ್ಷದ ಕೃಷ್ಣ ಜನ್ಮಾಷ್ಟಮಿ

ಮೊಗ್ರು: ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ರಾಮ ಶಿಶು ಮಂದಿರ ಅಲೆಕ್ಕಿ-ಮುಗೇರಡ್ಕ ಇದರ ಜಂಟಿ ಆಶ್ರಯದಲ್ಲಿ 3ನೇ ವರ್ಷದ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಆ.26ರಂದು ಶ್ರೀ ರಾಮ ಶಿಶು ಮಂದಿರ ಆವರಣದಲ್ಲಿ ಶ್ರೀ ಬಾಲಕೃಷ್ಣ ತೊಟ್ಟಿಲ ಸಂಭ್ರಮ, ಮೊಸರು ಕುಡಿಕೆ, ಶಿಶು ಮಂದಿರದ ಪುಟಾಣಿಗಳಿಂದ ಸಾoಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಹಾಗೂ 2025ರಲ್ಲಿ ನಡೆಯುವ ಸಂಘದ 25ನೇ ವರ್ಷದ ಬೆಳ್ಳಿ ಹಬ್ಬ ಲೋಗೋ ಅನಾವರಣ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗೌರವಾಧ್ಯಕ್ಷ ಉದಯ ಭಟ್ ಕೊಳಬ್ಬೆ, ಶಿಶುಮಂದಿರ ಯು.ಜಿ ರಾಧಾ ಭಟ್, ಸಂಚಾಲಕ ರಮೇಶ್ ನೆಕ್ಕರಾಜೆ, ನಿವೃತ್ತ ಶಿಕ್ಷಕ ಸತ್ಯಶಂಕರ ಭಟ್, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖoಡಿಗ, ಮಾತೃ ಮಂಡಳಿ ಅಧ್ಯಕ್ಷೆ ಗೀತಾ ಚಂದ್ರಹಾಸ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಲವಾರು ವರ್ಷ ಮೊಗ್ರು ಗ್ರಾಮದಲ್ಲಿ ಸೇವೆ ಸಲ್ಲಿಸಿ ಮಂಗಳೂರಿಗೆ ವರ್ಗಾವಣೆ ಗೊಂಡಿರುವ ಪವರ್ ಮ್ಯಾನ್ ಸಂದೀಪ್ ಎಂ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪಡೆದ ಯುವಸಾಹಿತಿ ಚಂದ್ರಹಾಸ ಕುಂಬಾರ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

Exit mobile version