Site icon Suddi Belthangady

ಬೆಳ್ತಂಗಡಿ ಸಂತ ತೆರೇಸಾ ಪ್ರೌಢ ಶಾಲೆಯಲ್ಲಿ ತಾಲೂಕು ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾಟ

ಬೆಳ್ತಂಗಡಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕರ್ನಾಟಕ ಸರಕಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಮತ್ತು ಸಂತ ತೆರೇಸಾ ಪ್ರೌಢಶಾಲೆ, ಬೆಳ್ತಂಗಡಿ ಇವರ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪ್ರೌಢಶಾಲ ಬಾಲಕ /ಬಾಲಕಿಯರ ಹ್ಯಾಂಡ್‌ಬಾಲ್ ಪಂದ್ಯಾಟ ಆ.24ರಂದು ಸಂತ ತೆರೇಸಾ ಪ್ರೌಢಶಾಲೆಯ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಯಿತು.

ಶಾಲಾ ವಿದ್ಯಾರ್ಥಿ ತಂಡ ಪ್ರಾರ್ಥನಾ ಗೀತೆಯೊಂದಿಗೆ ದೈವಾನುಗ್ರಹವನ್ನು ಬೇಡಿದರು. ವೇದಿಕೆಯಲ್ಲಿರುವ ಗಣ್ಯರು ದೀಪ ಬೆಳಗಿಸಿ ಉದ್ಘಾಟನೆಗೈದರು. ಶಾಲಾ ಮುಖ್ಯಶಿಕ್ಷಕಿ ವಂ.ಭಗಿನಿ ಲೀನಾ ಡಿ’ಸೋಜರವರು ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿಯವರು ಸೋಲು ಗೆಲುವು ಮುಖ್ಯವಲ್ಲ ಕ್ರೀಡಾ ಸ್ಫೂರ್ತಿ ಮುಖ್ಯ ಎಂದು ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯರವರು ಕ್ರೀಡಾ ನಿಯಮಗಳನ್ನು ತಿಳಿಸಿ ಸರ್ವರಿಗೆ ಶುಭಕೋರಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಶಾಲಾ ಸಂಚಾಲಕ ವಂ.ಭಗಿನಿ ತೆರೇಸಿಯಾ ಸೇರಾರವರು ಮಾತನಾಡಿ ‘ಅವಕಾಶಗಳ ಬಾಗಿಲು ತೆರೆದಿದೆ.’ ಪ್ರತಿಯೋರ್ವರು ಅದನ್ನು ಬಳಸಬೇಕೆಂದರು. ಶಾಲಾ ಕನ್ನಡ ಶಿಕ್ಷಕಿ ಉಮ್ಮಕ್ಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು. ವಿಜ್ಞಾನ ಶಿಕ್ಷಕಿ ನಿಶಾರವರು ವಂದನಾರ್ಪಣೆ ಗೈದರು. ತಾಲೂಕಿನ ವಿವಿಧ ಶಾಲೆಯ 10 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.

ಬಾಲಕರ ವಿಭಾಗದಲ್ಲಿ ಎಸ್.ಡಿ.ಎಂ ಉಜಿರೆ – ಪ್ರಥಮ, ಸಂತ ತೆರೇಸಾ ಪ್ರೌಢಶಾಲೆ ಬೆಳ್ತಂಗಡಿ – ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಸಂತ ತೆರೇಸಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ, ಹೋಲಿ ರೆಡೀಮ‌ರ್ ಆಂಗ್ಲ ಮಾಧ್ಯಮ – ದ್ವಿತೀಯ

Exit mobile version