Site icon Suddi Belthangady

ಬೆಳ್ತಂಗಡಿ: ಟೈಲರ್ಸ್ ಸಹಕಾರ ಸಂಘದ ವಾರ್ಷಿಕ ಸಭೆ- ಒಟ್ಟು ಲಾಭ 15.18 ಲಕ್ಷ, ಸದಸ್ಯರಿಗೆ 17% ಡಿವಿಡೆಂಡ್

ಬೆಳ್ತಂಗಡಿ: ಬೆಳ್ತಂಗಡಿ ಟೈಲರ್ಸ್ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆ.24ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು.

2016ರಲ್ಲಿ ಪ್ರಾರಂಭಗೊಂಡ ಸಹಕಾರಿಯು 4 ಲಕ್ಷ ಪಾಲು ಬಂಡವಾಳ, 200 ಸದಸ್ಯರನ್ನು ಹೊಂದಿದ್ದ ಸಂಘ ಇದೀಗ 1192 ಸದಸ್ಯರನ್ನು ಹೊಂದಿ 11.83 ಲಕ್ಷ ಪಾಲು ಬಂಡವಾಳ ದೊಂದಿಗೆ 19 ಕೋಟಿ ಠೇವಣಿ ಸಂಗ್ರಹಿಸಿ ಆರ್ಥಿಕ ವರ್ಷದಲ್ಲಿ ಸಂಘ ಒಟ್ಟು ರೂ.50 ಕೋಟಿಯಷ್ಟು ವ್ಯವಹಾರ ನಡೆಸಿ ರೂ.15.18ಲಕ್ಷ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.17 ಡಿವಿಡೆಂಡ್ ಘೋಷಣೆ ಮಾಡಿದರು.

ಕಾರ್ಯನಿರ್ವಣಾಧಿಕಾರಿ ರೋಲ್ಸನ್ ಜೋಯಲ್ ಮೊರಾಸ್ ವಾರ್ಷಿಕ ವರದಿ, ಲೆಕ್ಕ ಪತ್ರ ಮಂಡಿಸಿದರು. ಪಿಯುಸಿ ಹಾಗೂ ಅದಕ್ಕಿಂತ ಮೇಲ್ಪಟ್ಟು ವಿದ್ಯಾಭ್ಯಾಸ ಮಾಡುತ್ತಿರುವ ಸಂಘದ ಸದಸ್ಯರ ಮಕ್ಕಳಿಗೆ ಮತ್ತು ಸಂಘದಲ್ಲಿ ಪಿಗ್ಮಿ ಸಂಗ್ರಾಹಕ ಫ್ರಾನ್ಸಿಸ್ ಮೊರಾಸ್, ಹರೀಶ್ ಹೆಗ್ಡೆ, ಸುಮತಿ, ವೆಂಕಪ್ಪ ಪೂಜಾರಿ ಹಾಗೂ ಅನಾರೋಗ್ಯ ಪೀಡಿತ ಬಾಲಕೃಷ್ಣ ರೈ, ವಿಶ್ವನಾಥ್ ಇವರಿಗೆ ಪ್ರೋತ್ಸಾಹ ಧನ ವಿತರಿಸಲಾಯತು.

ಅಗಲಿದ ಸದಸ್ಯರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ಕೆ.ಕುಶಾಲಪ್ಪ ಗೌಡ, ಮುಖ್ಯ ನಿರ್ದೇಶಕರುಗಳಾದ ಎನ್.ವಸಂತ್, ಸದಾನಂದ ಶೆಟ್ಟಿ, ವಲೇರಿಯನ್ ಪಾಯಿಸ್, ವಸಂತ ಪೂಜಾರಿ, ರಾಜು ಪೂಜಾರಿ, ಜೋಸೆಫ್ ಡಿ’ಸೋಜ, ಶಶಿಕಲಾ ಗೋಪಾಲ್, ಪಾರ್ವತಿ ಎ. ಮತ್ತು ಉಷಾ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಕೆ.ಕುಶಾಲಪ್ಪ ಗೌಡ ಸ್ವಾಗತಿಸಿ, ನಿರ್ದೇಶಕ ಸದಾನಂದ ಶೆಟ್ಟಿ ವಂದಿಸಿದರು.ನಿರ್ದೇಶಕಿ ಶಾಂಭವಿ ಪಿ.ಬಂಗೇರ ಕಾರ್ಯಕ್ರಮ ನಿರೂಪಿಸಿದರು.ಸಿಬ್ಬಂದಿಗಳಾದ, ನಿಶಾ, ಹರ್ಷಿತಾ ಸಹಕರಿಸಿದರು.

Exit mobile version