Site icon Suddi Belthangady

ವಲಯ ಮಟ್ಟದ ಕಬಡ್ಡಿ ಪಂದ್ಯಾಟ- ತಾಲೂಕು ಮಟ್ಟಕ್ಕೆ ಆಯ್ಕೆಯಾದ ಮನ್ ಶರ್ ಆಂಗ್ಲ ಮಾಧ್ಯಮ ಶಾಲೆಯ ಕಬಡ್ಡಿ ತಂಡ

ಬೆಳ್ತಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಆ.23ರಂದು ಮೇಲಂತಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಮನ್ ಶರ್ ಆಂಗ್ಲ ಮಾಧ್ಯಮ ಶಾಲೆಯ ತಂಡವು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದೆ.

ಸುಹೈಲ್(7ನೇ ತರಗತಿ) ಬೆಸ್ಟ್ ರೈಡರ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರೆ, ಸಫ್ವಾನ್ (7ನೇ), ಶಾದ್ದಾದ್ (7ನೇ), ಆಶಿರ್ ಜವಾದ್ (7ನೇ), ಶಮ್ಮಾಸ್ (7ನೇ), ಇಶಾಮ್ ಅಲಿ (7ನೇ), ಮಹಮ್ಮದ್ ಫಾಜ್ (7ನೇ), ಮೊಹಮ್ಮದ್ ಆಶಿರ್ (7ನೇ), ಸುಫೈನ್ (7ನೇ), ಸಾಬಿತ್(7ನೇ), ತಮೀಮ್ (6ನೇ), ಆಶಿಮ್(6ನೇ) ಇವರು ತಂಡವನ್ನು ಪ್ರತಿನಿಧಿಸಿದ್ದಾರೆ. ಪಂದ್ಯಾಟದ ಸಮಾರೋಪ ಕಾರ್ಯಕ್ರಮದಲ್ಲಿ ಮನ್ ಶರ್ ವಿದ್ಯಾಸಂಸ್ಥೆಯ ಶಿಕ್ಷಕಿಯರಾದ ರಮ್ಯಾ ಆರ್ ಹಾಗೂ ಸುಧಾ ಬಿ ಉಪಸ್ಥಿತರಿದ್ದರು.

Exit mobile version