Site icon Suddi Belthangady

ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಮೊಹಮ್ಮದ್ ಮಾಝ್ ರಾಜ್ಯ ಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ

ಉಜಿರೆ: ಆಗಸ್ಟ್ 17ರಂದು ಮೂಡಬಿದ್ರೆಯ ಎಂ.ಕೆ.ಅನಂತರಾಜ ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಶೊರಿನ್ ರಿಯೋ ಕರಾಟೆ ಅಸೋಸಿಯೇಷನ್ ಮತ್ತು ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಸಹಯೋಗದೊಂದಿಗೆ ನಡೆದ 21ನೇ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ 2024 ಸ್ಪರ್ಧೆಯಲ್ಲಿ ಬೆಳ್ತಂಗಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಮಾಝ್ ರವರು ಕರಾಟೆ ಫೈಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ. ಇವರು ಶಿಹಾನ್ ಅಬ್ದುಲ್ ರೆಹಮಾನ್ ರವರಲ್ಲಿ ತರಬೇತಿ ಪಡೆದಿದ್ದರು.ಇವರು ಬೆಳ್ತಂಗಡಿ ನಿವಾಸಿಯಾದ ಮುಸ್ತಫ(ಪುತ್ತ) ಹಾಗು ಝಮೀರಾ ದಂಪತಿಯ ಪುತ್ರರಾಗಿರುತ್ತಾರೆ.

Exit mobile version