ಬೆಳ್ತಂಗಡಿ: ಖಾಸಗಿಯವರು ಅತಿಕ್ರಮಣ ಮಾಡಿಕೊಂಡಿದ್ದ ತೆಕ್ಕಾರು ಗ್ರಾಮ ಪಂಚಾಯತ್ ನೂತನ ಕಟ್ಟಡ ಸಹಿತ ಜಾಗವನ್ನು ಗ್ರಾಮ ಪಂಚಾಯತ್ ವಶಪಡಿಸಿಕೊಂಡಿದೆ.
ತಾಲೂಕಿನ ಗಡಿಭಾಗದ ತೆಕ್ಕಾರು ಗ್ರಾಮ ಪಂಚಾಯತ್‌ನ ನೂತನ ಕಟ್ಟಡ ತಕರಾರು ಸುಮಾರು 2 ವರ್ಷಗಳ ಕಾಲ ನ್ಯಾಯಾಲಯದಲ್ಲಿತ್ತು. ನೂತನ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯೆಯೊಬ್ಬರು ತಮ್ಮ ಜಾಗವೆಂದು ಹೇಳಿ ಕಟ್ಟಡ ನಿರ್ಮಾಣ ಸಂದರ್ಭ ಯಮುನಾ ನಿವಾಸ ಎಂದು ಬೋರ್ಡ್ ಅಳವಡಿಸಿದ್ದರು.
ಡಿ.ಸಿ. ರ್ಕೊಟ್‌ನಲ್ಲಿ ಗ್ರಾಮ ಪಂಚಾಯತ್ ಕಟ್ಟಡ ಎಂದು ತೀರ್ಪು ಬಂದಿದ್ದು, ತಕರಾರು ಇತ್ಯರ್ಥಗೊಂಡಿದೆ. ಉಪ್ಪಿನಂಗಡಿ ಠಾಣಾ ಪೊಲೀಸರು, ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸದ್ರಿ ಜಾಗವನ್ನು ಸ್ವಾಧೀನ ಪಡಿಸಿಕೊಂಡಿದ್ದು, ಕಟ್ಟಡ ಕಾಮಗಾರಿ ಮುಂದುವರಿಯಲಿದೆ.