Site icon Suddi Belthangady

ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಮೊಹಮ್ಮದ್ ನಾಫೀ ರಾಜ್ಯ ಮಟ್ಟದ ಕರಾಟೆಯಲ್ಲಿ ಕಂಚಿನ ಪದಕ

ಉಜಿರೆ: ಆಗಸ್ಟ್ 17ರಂದು ಮೂಡಬಿದ್ರೆಯ ಎಂ.ಕೆ.ಅನಂತರಾಜ ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಶೊರಿನ್ ರಿಯೋ ಕರಾಟೆ ಅಸೋಸಿಯೇಷನ್ ಮತ್ತು ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಸಹಯೋಗದೊಂದಿಗೆ ನಡೆದ 21ನೇ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ 2024 ಸ್ಪರ್ಧೆಯಲ್ಲಿ ಬೆಳ್ತಂಗಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ನಾಫೀ ರವರು ಕರಾಟೆ ಫೈಟಿಂಗ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ.

ಇವರು ಶಿಹಾನ್ ಅಬ್ದುಲ್ ರೆಹಮಾನ್ ರವರಲ್ಲಿ ತರಬೇತಿ ಪಡೆದಿದ್ದರು.ಇವರು ಮದ್ದಡ್ಕ ನಿವಾಸಿಯಾದ ಅಬ್ದುಲ್ ಸಮದ್ ಹಾಗು ಸುಮಯ್ಯ ದಂಪತಿಯ ಪುತ್ರರಾಗಿರುತ್ತಾರೆ.

Exit mobile version