ಕೊಕ್ಕಡ: ಕೊಕ್ಕಡ ಗ್ರಾಮದ ಇತಿಹಾಸ ಪ್ರಸಿದ್ಧ ಕ್ಷೇತ್ರ ಮಾಯಿಲಕೋಟೆಯ ಬಳಿ ಕಂರ್ಬಿಲದಲ್ಲಿ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರದೇಶದಲ್ಲಿ ತ್ಯಾಜ್ಯಗಳ ರಾಶಿಯೇ ಕಂಡುಬಂದಿದೆ. ಇಲ್ಲಿ ಹಲವು ಸಮಯದಿಂದ ಕಿಡಿಗೇಡಿಗಳು ಕಸ ಹಾಗೂ ಕೋಳಿ ಮಾಂಸದ ತ್ಯಾಜ ತಂದು ಸುರಿಯುತ್ತಿದ್ದು, ಪರಿಸರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಸೃಷ್ಟಿಸಿದೆ.
ತ್ಯಾಜಗಳಿಂದ ಚರಂಡಿಗಳು ತುಂಬಿದ ಪರಿಣಾಮ ಜನಸಾಮಾನ್ಯರಿಗೆ ನಡೆದು ಹೋಗಲೂ ಕಷ್ಟವಾಗಿದೆ ಎಂಬುದು ಅಲ್ಲಿನ ನಿವಾಸಿಗಳ ನೋವು ಗ್ರಾಮ ಪಂಚಾಯಿತಿ ವತಿಯಿಂದ ಈ ಬಗ್ಗೆ ಹಲವು ಬಾರಿ ಗ್ರಾಮ ಸಭೆಗಳಲ್ಲಿ ಸಾರ್ವಜನಿಕವಾಗಿ ಎಷ್ಟೇ ಮಾಹಿತಿ ನೀಡಿದರೂ ಕೆಲವು ಕಿಡಿಗೇಡಿಗಳು ಕ್ಯಾರೇ ಎನ್ನುತ್ತಿಲ್ಲ, ಅದಷ್ಟು ಬೇಗ ಸಂಬಂಧಪಟ್ಟ ಇಲಾಖೆಗಳು ಈ ಪ್ರದೇಶದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.