Site icon Suddi Belthangady

ತಣ್ಣೀರುಪಂತ ಗ್ರಾಮ ಪಂಚಾಯತ್ ನಲ್ಲಿ ಶಾಂತಿ ಸಭೆ

ತಣ್ಣೀರುಪಂತ: ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇರಿ ಎಂಬಲ್ಲಿ ಹಲವಾರು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದ ಗಣೇಶನ ಕಟ್ಟೆಗೆ ಸಮಿತಿ ವತಿಯಿಂದ ಬೇಲಿ ಅಳವಡಿಸಲು ಬೇಲಿ ಕಲ್ಲು ಅಳವಡಿಸುವ ಕಾರ್ಯ ಆರಂಭಿಸಲಾಗಿತ್ತು.ಈ ಬಗ್ಗೆ ಆಕ್ಷೇಪ ಕೇಳಿಬಂದಿದ್ದು ತಹಶೀಲ್ದಾರ್ ಗೆ ದೂರು ಬಂದ ಮೇರೆಗೆ ತಣ್ಣೀರುಪಂತ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆ.22ರಂದು ಶಾಂತಿ ಸಭೆ ನಡೆಸಲಾಯಿತು.

ಬೇಲಿ ಅಳವಡಿಸುವ ಕುರಿತಂತೆ ಗ್ರಾಮ ಪಂಚಾಯತ್ ಮುತುವರ್ಜಿ ವಹಿಸಿ ಗ್ರಾಮದ ಉಭಯ ಧಾರ್ಮಿಕ ಮುಖಂಡರ ಜೊತೆ ಸಮಾಲೋಚನೆ ನಡೆಸಿ ನಿಯಮಾನುಸಾರ ಕ್ರಮವಹಿಸುವಂತೆ ತಹಶೀಲ್ದಾರ್ ಪ್ರಥ್ವಿಸಾನಿಕಂ ಸಲಹೆ ನೀಡಿದರು. ಉಪ್ಪಿನಂಗಡಿ ಪೋಲಿಸ್ ಠಾಣಾಧಿಕಾರಿ ಅವಿನಾಶ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ, ಪಿಡಿಓ ಶ್ರವಣ್ ಸಹಿತ ಸದಸ್ಯರು ಹಾಜರಿದ್ದರು. ನಾಗರೀಕರು ಉಪಸ್ಥಿತರಿದ್ದರು.

Exit mobile version