Site icon Suddi Belthangady

ಕೊಯ್ಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಚೆಕ್ ವಿತರಣೆ

ಕೊಯ್ಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಮಾರ್ಗದರ್ಶಕರೂ, ಕೊಯ್ಯೂರು ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಅಶೋಕ್ ಕುಮಾರ್ ಭಟ್ ರವರು ವಿದ್ಯಾಸಿರಿಗೆ ಮತ್ತು ಮಕ್ಕಳ ಯಕ್ಷಗಾನ ನೃತ್ಯ ತರಬೇತಿಗಾಗಿ ರೂ.12,000 ದ ಚೆಕ್ಕನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ಯಾಮಲಾ ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಧಾಕರ ದೇವಾಡಿಗ ಇವರಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಶಾಲಾ ಸಹಶಿಕ್ಷಕಿ ಚೆನ್ನಮ್ಮ ಮತ್ತು ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಡೀಕಯ್ಯ ಪೂಜಾರಿ ಉಪಸ್ಥಿತರಿದ್ದರು.

Exit mobile version