Site icon Suddi Belthangady

ಉಜಿರೆ: ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜುನಲ್ಲಿ ಎನ್ ಎಸ್ ಎಸ್ ಘಟಕದ ಕೃಷಿ ಮಾಹಿತಿ ಮತ್ತು ಕೆಸರು ಗದ್ದೆ ಕೂಟ ಕಾರ್ಯಕ್ರಮ

ಉಜಿರೆ: ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು ಎನ್ ಎಸ್ ಎಸ್ ಘಟಕದ ವತಿಯಿಂದ ಕೃಷಿ ಮಾಹಿತಿ ಮತ್ತು ಕೆಸರುಗದ್ದೆ ಕೂಟ ಕಾರ್ಯಕ್ರಮ ಆ.17ರಂದು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜುನ ಪ್ರಾಂಶುಪಾಲ ಸಂತೋಷ್ ಇವರು ವಹಿಸಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಬೂಚ ನಾಯ್ಕ ಪೆರ್ಲ ಕೃಷಿಕರು ಇವರು ವಹಿಸಿ ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವ ಮತ್ತು ಗದ್ದೆ ಕೃಷಿ ಹಾಗೂ ಅಡಿಕೆ ತೋಟದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.

ಹಾಗೂ ಈ ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ನ ಯೋಜನಾಧಿಕಾರಿ ಪ್ರಕಾಶ್ ಮತ್ತು ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜುನ ಎಲ್ಲಾ ಭೋದಕ ಮತ್ತು ಬೋಧಕೇತರ ಸಿಬ್ಬಂಧಿಗಳು ಹಾಗೂ ಎನ್ ಎಸ್ ಎಸ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Exit mobile version