Site icon Suddi Belthangady

ತೆಂಕಕಾರಂದೂರು: ಅಜಿತ್ ಕುಮಾರ್ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಾಜಿ ಡೆಲ್ಲಿಯಲ್ಲಿ ಮಾಸ್ಟರ್ ಆಫ್ ಡಿಸೈನ್ ಪದವಿ

ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ಕಂಬಾಜೆ ಭಾರತಿ ಮತ್ತು ದಯಾನಂದ ಪೂಜಾರಿಯವರ ಪುತ್ರ ಅಜಿತ್ ಕುಮಾರ್ ಇವರು ಭಾರತದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ‘ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಾಜಿ ಡೆಲ್ಲಿ ‘(IIT DELHI) ಯಲ್ಲಿ ಮಾಸ್ಟರ್ ಆಫ್ ಡಿಸೈನ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ಇವರು 2015ರಲ್ಲಿ ಡಿಪ್ಲೋಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಉಜಿರೆ ಎಸ್.ಡಿ.ಎಮ್ ಪಾಲಿಟೆಕ್ನಿಕ್ ನಲ್ಲಿ ಪಡೆದು, 2018ರಲ್ಲಿ ಬ್ಯಾಚುಲರ್ ಆಪ್ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದು ನಂತರ ಬೊರೋಸಿಲ್ ಡಿಸೈನ್ ಇಂಡಸ್ಟ್ರಿಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಇಂಡೋ ಎಐ ಸಂಸ್ಥೆ ದೆಹಲಿ ಯಲ್ಲಿ ಡಿಸೈನ್ ಹೆಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಡಿಸೈನ್ ವಿಭಾಗದಲ್ಲಿ ಎಕ್ಸ್ ಪ್ರೊ 201 ಅವಾರ್ಡ್ ವಾರಾಣಸಿ ಸುಬ್ರಾಯ ಭಟ್ ಅವಾರ್ಡ್ ಮತ್ತು ಪ್ರೊಡೆಕ್ಟ್ ಇಂಜಿನಿಯರಿಂಗ್ ಅವಾರ್ಡ್ ನ್ನು ಪಡೆದಿರುತ್ತಾರೆ.

Exit mobile version