Site icon Suddi Belthangady

ಮಸ್ಜಿದ್ ಎ ಖಮರುಲ್ ಇಸ್ಲಾಂ, ರಝಾನಗರ ಕಲಾಬಾಗಿಲು ಇದರ ನೂತನ ಅಧ್ಯಕ್ಷರಾಗಿ ಶೇಕ್ ರಹ್ಮತ್ತುಲ್ಲಾಹ್ ಆಯ್ಕೆ

ಕಲಾಬಾಗಿಲು: ಮಸ್ಜಿದ್ ಎ ಖಮರುಲ್ ಇಸ್ಲಾಂ ರಝಾನಗರ ಕಲಾಬಾಗಿಲು ಇದರ ನೂತನ ಅಧ್ಯಕ್ಷರಾಗಿ ಬುರೂಜ್ ಶಾಲಾ ಸಂಚಾಲಕ ಶೇಕ್ ರಹ್ಮತ್ತುಲ್ಲಾಹ್ ಇವರು ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷ ಹಸನ್ ಸಾಹೇಬ್ ರವರು ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಅನೇಕ ಸದಸ್ಯರ ಒತ್ತಾಯದಿಂದ ಶೇಕ್ ರಹ್ಮತ್ತುಲ್ಲಾಹ್ ರವರನ್ನು ಆಯ್ಕೆ ಮಾಡಲಾಯಿತು.

ಜಮೀಯ್ಯತುಲ್ ಫಲಾಹ್ ಬಂಟ್ವಾಳದ ಉಪಾಧ್ಯಕ್ಷ,ಮೀಫ್ ಸಂಸ್ಥೆ ಮಂಗಳೂರು ಇದರ ಕನ್ವೀನರ್, ಸಂಯುಕ್ತ ಜಮಾಅತ್ ಬಂಟ್ವಾಳದ ಕಾರ್ಯದರ್ಶಿ,ರಾಜ್ಯ ಫಸ್ಟ್ ಕರ್ನಾಟಕ ಶಾಲಾ ಒಕ್ಕೂಟದ ಉಪಾಧ್ಯಕ್ಷ, ಬಂಟ್ವಾಳ ಕ್ರಷಿಕ ಸಮಾಜದ ಚುನಾಯಿತ ಸದಸ್ಯ, ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು ಉತ್ತಮ ಸಾಮಾಜಿಕ ಕಾರ್ಯಕರ್ತರಾಗಿರುವರು.

ಕಾರ್ಯದರ್ಶಿಯಾಗಿ ನಯಾಝ್ ಶೇಕ್, ಕೋಶಾಧಿಕಾರಿ ಅಬ್ದುಲ್ ಶುಕೂರ್, ಉಪಾಧ್ಯಕ್ಷ ರಾಗಿ ಕರೀಮ್ ಸಾಹೇಬ್, ಉಪ ಕಾರ್ಯದರ್ಶಿಯಾಗಿ, ಅಬ್ದುಲ್ಲಾ ರಝಾನಗರ, ಸದಸ್ಯರುಗಳಾಗಿ ಹಸನ್ ಸಾಹೇಬ್,
ಅಬ್ದುಲ್ ಅಝೀಝ್ ಸೇವಾ, ಹಮೀದ್ ಪಿಕೆ, ನೂರುಲ್ಲಾ ಮೂಡಬಿದ್ರೆ, ರಶೀದ್ ನೇರಳಕಟ್ಟೆ, ಮಹಮೂದ್ ಸೇವಾ, ಶಬ್ಬೀರ್ ಪಂಜೋಡಿ, ಅಬ್ದುಲ್ ಗಫೂರ್ ರಝಾನಗರ, ಮತ್ತು ಗೌರವಾಧ್ಯಕ್ಷರಾಗಿ, ಹಸನ್ ಸಾಹೇಬ್ ಕಲಾಬಾಗಿಲು ಆಯ್ಕೆಯಾಗಿರುತ್ತಾರೆ.

Exit mobile version