Site icon Suddi Belthangady

ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ಶ್ರೀಚರಣ್ ಜೈನ್ ರಿಗೆ ಕರಾಟೆಯಲ್ಲಿ ಚಿನ್ನದ ಪದಕ

ಉಜಿರೆ: ಮೂಡುಬಿದಿರೆಯ ಎಂ.ಕೆ.ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಆ.17ರಂದು ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಶೋರಿನ್ ರಿಯು ಕರಾಟೆ ಅಸೋಸಿಯೇಶನ್ ಮತ್ತು ಸ್ವಾಮಿಸ್ ಸ್ಟ್ರೆಂತ್ ಟ್ರೈನಿಂಗ್ ಸಹಯೋಗದೊಂದಿಗೆ ನಡೆದ 21ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್-2024 ಸ್ಪರ್ಧೆಯಲ್ಲಿ ಉಜಿರೆಯ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶ್ರೀಚರಣ್ ಜೈನ್ ಕರಾಟೆ ಫೈಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದಾರೆ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾರೆ. ಅವರು ಸೆನ್ಸಾಯಿ ಅಬ್ದುಲ್ ರೆಹಮಾನ್ ಅವರಲ್ಲಿ ತರಬೇತು ಪಡೆದಿದ್ದರು.

ಇವರು ಬಂಗಾಡಿಯ ಪ್ರೇಮ ಮತ್ತು ಜಯರಾಜ್ ಇಂದ್ರ ರವರ ಪುತ್ರ.

Exit mobile version