Site icon Suddi Belthangady

ಕಕ್ಯಪದವು: ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಶೇ.100 ಫಲಿತಾಂಶ

ಕಕ್ಯಪದವು: ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ  ಪದವಿ ವಿಭಾಗದ ಬಿ.ಕಾಂ  ಆರನೇ ಚತುರ್ಮಾಸದಲ್ಲಿ 100%  ಫಲಿತಾಂಶ ದಾಖಲಾಗಿದ್ದು,  ವಿದ್ಯಾರ್ಥಿನಿ ಜ್ಯೋತಿ ಕುಮಾರಿ 97% ಫಲಿತಾಂಶವನ್ನು ಪಡೆದು ಮೂರು ವಿಷಯಗಳಲ್ಲಿ100 ಕ್ಕೆ 100 ಅಂಕಗಳನ್ನು ಪಡೆದು ಪ್ರಥಮ  ಸ್ಥಾನವನ್ನು ಗಳಿಸಿರುತ್ತಾರೆ. ಪೃಥ್ವಿ, ಮೇಘಶ್ರೀ, ಭಾರ್ಗವಿ ಮೂರು ವಿದ್ಯಾರ್ಥಿನಿಯರು 91% ಫಲಿತಾಂಶವನ್ನು ದಾಖಲಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇಬ್ಬರು ವಿದ್ಯಾರ್ಥಿನಿಯರಾದ ಸ್ವಸ್ತಿ ಹಾಗೂ ಚೈತನ್ಯ 87% ಫಲಿತಾಂಶವನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿದ್ಯಾರ್ಥಿನಿ ವಿದ್ಯಾ 85% ಫಲಿತಾಂಶ ದಾಖಲಿಸಿ ಚತುರ್ಥ ಸ್ಥಾನವನ್ನು ಗಳಿಸಿರುತ್ತಾರೆ. ಸೌಮ್ಯ 81% ಹಾಗೂ ಮೊನಿಷಾ 80% ಫಲಿತಾಂಶ ಗಳಿಸಿರುತ್ತಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಟ ಹಾಗೂ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡು ಒಟ್ಟಾರೆಯಾಗಿ ಬಿ.ಕಾಂ ಪದವಿ ವಿಭಾಗವು 100% ಫಲಿತಾಂಶ ದಾಖಲಿಸಿರುವುದು ಹೆಮ್ಮೆಯ ವಿಚಾರ.

Exit mobile version