Site icon Suddi Belthangady

ಪತ್ರಕರ್ತ ಸುನಿಲ್ ಧರ್ಮಸ್ಥಳರಿಗೆ ಬೆಸ್ಟ್ ತನಿಖಾ ವರದಿಗಾರ ಪ್ರಶಸ್ತಿ-ಟಿಎನ್ ಐಟಿಯಿಂದ ಕೊಡಲ್ಪಡುವ ಪ್ರಶಸ್ತಿ ಪ್ರದಾನ

ಬೆಂಗಳೂರು: ದಕ್ಷಿಣ ಭಾರತದ ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ದೃಶ್ಯ ಮಾಧ್ಯಮಗಳ ಸಾಧಕರನ್ನು ಗುರುತಿಸಿ ದಿ ನ್ಯೂ ಇಂಡಿಯನ್ ಟೈಮ್ಸ್ ಕೊಡಲ್ಪಟ್ಟ 2024-25ನೇ ಸಾಲಿನ ಅತ್ಯುತ್ತಮ ತನಿಖಾ ವರದಿಗಾರ ಪ್ರಶಸ್ತಿಗೆ ದೃಶ್ಯಮಾಧ್ಯಮದ ವರದಿಗಾರ ಸುನಿಲ್ ಧರ್ಮಸ್ಥಳ ಭಾಜನರಾಗಿದ್ದಾರೆ.ರಿಪಬ್ಲಿಕ್ ಕನ್ನಡ ವಾಹಿನಿಯಲ್ಲಿ ಕ್ರೈಂ ಬ್ಯೂರೋ ಹೆಡ್ ಆಗಿರುವ ಸುನಿಲ್ ಧರ್ಮಸ್ಥಳರವರು ಹಲವಾರು ತನಿಖಾ ವರದಿಗಳನ್ನು ಮಾಡಿದ್ದರು. ಇತ್ತೀಚೆಗೆ ಬೆಂಗಳೂರಿನಲ್ಲಿ ಅತೀ ಹೆಚ್ಚಾಗಿ ನೆಲೆಸಿರುವ ಬಾಂಗ್ಲಾ ದೇಶಿಗಳ ಬಗ್ಗೆ ಸ್ಟಿಂಗ್ ಆಪರೇಷನ್ ನಡೆಸಿ ಮಾಡಿದ್ದ ವರದಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಇದನ್ನು ವರದಿ ಮಾಡಿರುವ ಸುನಿಲ್ ಧರ್ಮಸ್ಥಳರವರಿಗೆ ಅತ್ಯುತ್ತಮ ತನಿಖಾ ವರದಿಗಾರ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿ ವಾಹಿನಿಗಳ ಹಲವು ವಿಭಾಗಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸುನಿಲ್ ರವರು ಧರ್ಮಸ್ಥಳದ ಜೋಡುಸ್ತಾನದ ರಾಮಣ್ಣ ಆಚಾರಿ ಮತ್ತು ಪ್ರಸನ್ನ ದಂಪತಿಗಳ ಪುತ್ರ. 2007ರಲ್ಲಿ ಎಸ್ ಡಿ ಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿ ನಂತರ ಕಸ್ತೂರಿ ಚಾನೆಲ್, ಟಿ ವಿ 9, ದಿಗ್ವಿಜಯ, ನ್ಯೂಸ್ 18 ಚಾನೆಲ್ ಗಳಲ್ಲಿ ಕ್ರೈಂ ವರದಿಗಾರ, ಕ್ರೈಂ ಬ್ಯುರೋ ಹೆಡ್ ಆಗಿ ಸೇವೆ ಸಲ್ಲಿಸಿದ್ದಾರೆ. ಈಗ ರಿಪಬ್ಲಿಕ್ ಕನ್ನಡ ವಾಹಿನಿಯಲ್ಲಿ ಕ್ರೈಂ ಬ್ಯೂರೋ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Exit mobile version