Site icon Suddi Belthangady

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿಶ್ವಾಸ್ ಶೆಟ್ಟಿ ರಾಜ್ಯ ಮಟ್ಟದ ಕರಾಟೆಯಲ್ಲಿ ಚಿನ್ನದ ಪದಕ

ಉಜಿರೆ: ಆಗಸ್ಟ್ 17ರಂದು ಮೂಡಬಿದ್ರೆಯ ಎಂ.ಕೆ.ಅನಂತರಾಜ ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಶೊರಿನ್ ರಿಯೋ ಕರಾಟೆ ಅಸೋಸಿಯೇಷನ್ ಮತ್ತು ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಸಹಯೋಗದೊಂದಿಗೆ ನಡೆದ 21ನೇ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ 2024 ಸ್ಪರ್ಧೆಯಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ವಿಶ್ವಾಸ್ ಶೆಟ್ಟಿ ರವರು ಕರಾಟೆ ಫೈಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದಾರೆ.

ಇವರು ಶಿಹಾನ್ ಅಬ್ದುಲ್ ರೆಹಮಾನ್ ರವರಲ್ಲಿ ತರಬೇತಿ ಪಡೆದಿದ್ದರು.ಇವರು ಉಜಿರೆಯ ವಸಂತ್ ಶೆಟ್ಟಿ ಹಾಗೂ ವಿಮಲಾ ದಂಪತಿಯ ಪುತ್ರರಾಗಿರುತ್ತಾರೆ.

Exit mobile version