Site icon Suddi Belthangady

ರಾಜ್ಯ ಮಟ್ಟದ ಕರಾಟೆ: ಉಜಿರೆಯ ಅಭಿನವ್ ಎ. ಮತ್ತು ಅನುಭವ್ ಎ. ಇವರಿಗೆ ಪ್ರಶಸ್ತಿ

ಬೆಳ್ತಂಗಡಿ: ಮೂಡಬಿದ್ರೆಯಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಉಜಿರೆಯ ಅಭಿನವ್ ಎ. ಇವರು ಬ್ಲಾಕ್ ಬೆಲ್ಟ್ ಮತ್ತು ಕುಮಿತೆ ವಿಭಾಗದ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.ಇವರು ಬೆಂಗಳೂರು ಕ್ರಸ್ಟ್ ಯುನಿವರ್ಟಿಯಲ್ಲಿ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿ ಹಾಗೂ ಅನುಭವ್ ಎ. ಇವರು ಕಟದಲ್ಲಿ ಚಿನ್ನದ ಪದಕ, ಕುಮಿತೆಯಲ್ಲಿ ಕಂಚಿನ ಪದಕ ಪಡೆದುಕೊಂಡಿರುತ್ತಾರೆ.ಇವರು ಉಜಿರೆ ಶ್ರೀ ಧ ಮ ಆಂಗ್ಲ ಮಾಧ್ಯಮ ಸಿಬಿಎಸ್ಇ 7ನೇ ತರಗತಿ ವಿದ್ಯಾರ್ಥಿ.

ಈ ಸಹೋದರರು ಉಜಿರೆಯ ಬಿಜೋಯಿ ಎಜೇನ್ಸಿಯ ಮಾಲಕರಾದ ಬಿಜೋಯಿ ಮತ್ತು ಷರಿತಾ ಬಿಜೋಯಿ ದಂಪತಿಯ ಪುತ್ರರು.ಶಿಹಾನ್ ಅಬ್ದುಲ್ ರಹಮಾನ್ ರವರಿಂದ ತರಬೇತಿ ಪಡೆದಿರುತ್ತಾರೆ.

Exit mobile version