Site icon Suddi Belthangady

ಭ್ರಷ್ಟಾಚಾರದ ಬಗ್ಗೆ ತನಿಖೆಯಾಗಲಿ- ರಕ್ಷಿತ್ ಹೇಳಿದ್ದಲ್ಲಿ ಪ್ರಮಾಣಕ್ಕೆ ರೆಡಿ: ರಕ್ಷಿತ್ ಶಿವರಾಂ ಆರೋಪಕ್ಕೆ ಬಿಜೆಪಿ ಮಂಡಲಾಧ್ಯಕ್ಷರಿಂದ ಸುದ್ದಿಗೋಷ್ಠಿಯಲ್ಲಿ ಉತ್ತರ

ಗುರುವಾಯನಕೆರೆ: ಕಾಂಗ್ರೆಸ್‌ ಮುಖಂಡ ರಕ್ಷಿತ್ ಶಿವರಾಂ ಆರೋಪಗಳು ಹಾಗೂ ಪುಂಜಾಲಕಟ್ಟೆ ಚಾರ್ಮಾಡಿ ಹಿತರಕ್ಷಣಾ ವೇದಿಕೆಯ ಆರೋಪಗಳಿಗೆ ಉತ್ತರಿಸಲು ಇಂದು ಬಿಜೆಪಿ ಮಂಡಲಾಧ್ಯಕ್ಷ ಶ್ರೀನಿವಾಸ ರಾವ್ ಗುರುವಾಯನಕೆರೆಯ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ ರಾವ್ ” ಪುಂಜಾಲಕಟ್ಟೆ-ಚಾರ್ಮಾಡಿ ಹಿತರಕ್ಷಣಾ ವೇದಿಕೆಯಿಂದ ಅಭಿವೃದ್ಧಿಗೆ ತಡೆಯೊಡ್ಡುವ ಸೂಚನೆ ಸಿಗ್ತಿದೆ. ಬೆಳ್ತಂಗಡಿಯ ಬಾರ್ ನಲ್ಲಿ ಡೀಲ್ ಆಗ್ತದೆ ಅಂತ ಸಮಿತಿಯವರು ಹೇಳಿದ್ದಾರೆ. ಅದು ಎಲ್ಲಿ ಯಾವಾಗ ಅಂತ ಸ್ಪಷ್ಟನೆ ಕೊಡಬೇಕು” ಎಂದರು.

ಮಾತು ಮುಂದುವರೆಸಿ ಬೆಂಗಳೂರಿನಲ್ಲಿದ್ದಾಗ ರಕ್ಷಿತ್ ಶಿವರಾಂ ಒಳ್ಳೆಯವರಾಗಿದ್ರು, ಇಲ್ಲಿ ಬಂದಾಗ ಯಾಕೆ ಹೀಗಾದ್ರೂ ಅಂತ ರಕ್ಷಿತ್ ಶಿವರಾಂರವರಿಗೆ ಕೇಳುತ್ತೇನೆ. ಫೇಕ್ ಅಕೌಂಟ್ ಗಳ ಮೂಲಕ ಶಾಸಕರ ಪತ್ನಿಯ ಪೋಸ್ಟರ್ ಹಾಕಿ ಕೀಳು ಮಟ್ಟದಲ್ಲಿ ಬಿಂಬಿಸಿದ್ದರು.ಅವರನ್ನು ಹೀಗೆ ಎಳೆದಿರುವುದು ಅಕ್ಷಮ್ಯ ಅಪರಾಧ. ಮೊನ್ನೆ ಶಾಸಕರು ಪ್ರಮಾಣದ ವೇಳೆ ಅವರ ಪತ್ನಿ, ಮಗುವಿನ ಬಗ್ಗೆ ಮಾತನಾಡಿದ್ದಕ್ಕೆ ಅವರಿಗೆ ನೋವಾಗುತ್ತದೆ. ಮುಳ್ಳು ಅವರ ಕಾಲಿಗೆ ತಾಗಿದಾಗ ನೋವಾಗುತ್ತದೆ. ರಕ್ಷಿತ್ ಫೇಕ್ ಅಕೌಂಟ್ ಮೂಲಕ ಶಾಸಕರ ಪತ್ನಿಯ ಪೋಸ್ಟರ್ ಮಾಡಿದವರನ್ನು ತಡೆಯಬೇಕಿತ್ತು. ಅದನ್ನೂ ಮಾಡಲಿಲ್ಲ” ಎಂದರು.

ಭ್ರಷ್ಟಾಚಾರ ಆರೋಪಗಳ ಬಗ್ಗೆ ಉತ್ತರಿಸುತ್ತಾ “ಶಾಸಕರು ಮಹಮ್ಮಾಯಿಯ ಸನ್ನಿಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಪ್ರಮಾಣ ಮಾಡಿದ್ದಾರೆ. ಕಾಂತಾರ ಚಿತ್ರದ ಡೈಲಾಗ್ ನಂತೆ ರಕ್ಷಿತ್ ಕೋರ್ಟ್ ನಲ್ಲಿ ನೋಡುತ್ತೇನೆ ಅಂದಿದ್ದಾರೆ. ನಮಗೆ ಧರ್ಮ, ದೇವರ ಮೇಲೆ ನಂಬಿಕೆಯಿದೆ. ರಕ್ಷಿತ್ ಶಿವರಾಂ ಒಂದು ಸಲ 4 ಕೋಟಿ, 5 ಕೋಟಿ ಅಂತ ರಕ್ಷಿತ್ ಹೇಳುತ್ತಾರೆ. ರಕ್ಷಿತ್ ಮತ್ತೊಮ್ಮೆಮಾರಿಗುಡಿಗೆ ಅಥವಾ ಅವರೇ ಹೇಳಿದ್ದಲ್ಲಿಗೆ ನಾವು ಬರುತ್ತೇವೆ..ಪ್ರಮಾಣಕ್ಕೆ ಬನ್ನಿ” ಎಂದು ಆಹ್ವಾನಿಸಿದರು.

ಭ್ರಷ್ಟಾಚಾರದ ಆರೋಪಗಳನ್ನು ಪ್ರಸ್ತಾಪಿಸಿ “ನೀವು ಆರೋಪಗಳನ್ನು ಮಾಡುತ್ತೀರಿ, ಸಾಕ್ಷಿಗಳನ್ನು ತೋರಿಸಿ. ಇವರ ಲೆಕ್ಕದಲ್ಲಿ ಕೋಟಿಗೆ ಬೆಲೆಯಿಲ್ವಾ. 40%ಸರ್ಕಾರ ಅಂತ ಹೋರಾಟ ಮಾಡಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಆದರೆ ಯಾವುದೇ ಶಾಸಕರ ಬಂಧನವಾಗಿಲ್ಲ. ನಿಮ್ಮ ಆರೋಪಗಳಿಗೆ ಹುರುಳಿಲ್ಲ” ಎಂದರು.ಹೀಗೆ ಹಲವು ಅರೋಪಗಳಿಗೆ ಬಿಜೆಪಿ ಮಂಡಲಾಧ್ಯಕ್ಷ ಶ್ರೀನಿವಾಸ ರಾವ್ ಉತ್ತರ ನೀಡುವ ಪ್ರಯತ್ನ ಮಾಡಿದ್ರು.

ಈ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಮತ್ತು ಜಯಾನಂದ್ ಗೌಡ ಉಪಸ್ಥಿತರಿದ್ದರು.

Exit mobile version