ಬೆಳ್ತಂಗಡಿ: ಮೊಗ್ರು ಗ್ರಾಮದ ಮುಗೇರಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಇಂದು ಮಕ್ಕಳಿಗೆ ಮೂಲಭೂತ ವ್ಯವಸ್ಥೆ ಕೊರತೆ, ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಿಂದ ಹಾಗೂ ಇಂಗ್ಲಿಷ್ ಶಿಕ್ಷಣದ ವ್ಯಾಮೋಹದಿಂದ ಗ್ರಾಮೀಣ ಮಟ್ಟದ ಮಕ್ಕಳು ಹೊರ ಊರಿನ ಪ್ರತಿಷ್ಠಿತ ಶಾಲೆಗೆ ತೆರಳತ್ತಿರುವ ಸರಕಾರಿ ಶಾಲೆ ಮುಚ್ಚುವ ಹಂತಕ್ಕೆ ಬಂದಿರುತ್ತದೆ.ಈ ವಿಷಯವನ್ನು ಮನಗಂಡ ಮುಗೇರಡ್ಕ ಗ್ರಾಮಸ್ಥರು ಈ ಶಾಲೆಯನ್ನು ಉಳಿಸಿ ಬೆಳೆಸುವ ಬಗ್ಗೆ ಮುಗೇರಡ್ಕದ ಸ್ಥಳೀಯ ನಿವಾಸಿಗಳಾದ ಒಬ್ಬ ಯೋಗ ಗುರು,13 ಕೃಷಿಕರು, 2 ಮಿಲಿಟರಿ ಸೇವೆಯಲ್ಲಿ ಇರುವರು ಸೇರಿ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ಮೊಗ್ರು ಎಂಬ ಟ್ರಸ್ಟ್ ರಚನೆ ಆಗಿರುತ್ತದೆ.
ಈ ಟ್ರಸ್ಟ್ ಮೂಲಕ ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಮುಗೇರಡ್ಕ ಶಾಲೆಯನ್ನು ಅಭಿವೃದ್ಧಿ ಪಡಿಸಿ, ಮುಂದಿನ ವರ್ಷದಿಂದ ನುರಿತ ಇಂಗ್ಲಿಷ್ ಶಿಕ್ಷಕರನ್ನು ಟ್ರಸ್ಟ್ ವತಿಯಿಂದ ನೇಮಕ ಮಾಡಿಸಿ ಸರಕಾರಿ ಕನ್ನಡ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಮಕ್ಕಳಿಗೆ ಉಚಿತವಾಗಿ ನೀಡುವುದು ಈ ಟ್ರಸ್ಟ್ ನ ಮುಂದಿನ ಉದ್ದೇಶ ಆಗಿರುತ್ತದೆ.ಈ ಟ್ರಸ್ಟ್ ಈಗಾಗಲೇ ಸರಕಾರ ನಿಯಮ ಪ್ರಕಾರ ರೆಜಿಸ್ಟರ್ ಆಫೀಸ್ ಲಿ ನೋಂದಣಿವಾಗಿ ಆಗಿರುತ್ತದೆ.
ಟ್ರಸ್ಟ್ ಸಾರ್ವಜನಿಕ ದೇಣಿಗೆಯನ್ನು ಬಯಸುವ ಕಾರಣ ಬ್ಯಾಂಕ್ ಖಾತೆಯನ್ನು ತೆರೆದಿದ್ದು ಇದರ ಕ್ಯೂಆರ್ ಕೋಡ್ ಅನ್ನು ಆ.19ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಧಿಕಾರಿ ಡಿ.ವೀರೇಂದ್ರ ಹೆಗಡೆ ಇವರು ಬಿಡುಗಡೆ ಮಾಡಿದರು. ಟ್ರಸ್ಟ್ ನ ಲೋಗೋವನ್ನು ಉಜಿರೆ ಲಕ್ಷ್ಮಿ ಇಂಡಸ್ಟ್ರಿಸ್ ಮಾಲಕ ಮೋಹನ್ ಕುಮಾರ್ ಇವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಕುಶಾಲಪ್ಪ ಗೌಡ ಎನ್ ಯೋಗ ಗುರುಗಳು ಮಂಗಳೂರು, ಕಾರ್ಯದರ್ಶಿ ಮನೋಹರ್ ಗೌಡ ಅಂತರ, ಉಪಾಧ್ಯಕ್ಷ ಆನಂದ ಗೌಡ ಬಿ ಮೊಗ್ರು, ಚಂದ್ರಹಾಸ್ ದೇವಸ್ಯ, ಕೋಶಧಿಕಾರಿಗಳಾದ ಪುರಂದರ ಗೌಡ ಎನ್, ಜೊತೆ ಕಾರ್ಯದರ್ಶಿ ಉಮೇಶ್ ಗೌಡ ಪಿ, ಟ್ರಸ್ಟಿಗಳಾದ ಸುಧಾಕರ್ ಎನ್, ಬಾಬು ಗೌಡ ಡಿ, ಚಂದಪ್ಪ ಡಿ.ಎಸ್., ಕೇಶವ ಜೆ ಇವರು ಉಪಸ್ಥಿತರಿದ್ದರು.