Site icon Suddi Belthangady

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಮಹಮ್ಮದ್ ನಶೀತ್ ಕರಾಟೆಯಲ್ಲಿ ದ್ವಿತೀಯ ಸ್ಥಾನ

ಉಜಿರೆ: ಆ.17ರಂದು ಮೂಡಬಿದ್ರೆಯ ಎಂ.ಕೆ.ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ  ಶೋರಿನ್ ರಿಯು ಕರಾಟೆ ಅಸೋಸಿಯೇಶನ್ ಮತ್ತು ಸ್ವಾಮಿಸ್ ಸ್ಟ್ರೆಂತ್ ಟ್ರೈನಿಂಗ್ ಸಹಯೋಗದೊಂದಿಗೆ ನಡೆದ 21ನೇ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್-2024 ಸ್ಪರ್ಧೆಯಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮಹಮ್ಮದ್  ನಶೀತ್ ಅವರು ಕರಾಟೆ ಫೈಟಿಂಗ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ್ದಾರೆ.

ಅವರು ಸೆನ್ಸಾಯಿ ಅಬ್ದುಲ್ ರೆಹಮಾನ್ ಅವರಲ್ಲಿ ತರಬೇತು ಪಡೆದಿದ್ದರು.ಅವರು ಉಜಿರೆ ಗಾಂಧಿನಗರ ನಿವಾಸಿ ಮಹಮ್ಮದ್ ಬಷೀರ್ ಮತ್ತು ನಿಶಾ ದಂಪತಿ ಪುತ್ರ.

Exit mobile version