Site icon Suddi Belthangady

ಐಸಿವೈಎಂ ಮತ್ತು ವೈಸಿಎಸ್ ಬೆಳ್ತಂಗಡಿ ಘಟಕದಿಂದ ಸ್ವಚ್ಛತಾ ಅಭಿಯಾನ

ಬೆಳ್ತಂಗಡಿ: ಐಸಿವೈಎಂ ಮತ್ತು ವೈಸಿಎಸ್ ಬೆಳ್ತಂಗಡಿ ಘಟಕದ ಸುಮಾರು 30 ಉತ್ಸಾಹಿ ಯುವಕರು ಆಗಸ್ಟ್ 18ರಂದು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.

“ಸ್ವಚ್ಛತೆ ಅದೆಷ್ಟೋ ಮಟ್ಟಿಗೆ ಆರೋಗ್ಯದ ಹಾದಿಯಾಗಿದೆ” ಎಂಬ ಸಿದ್ಧಾಂತವನ್ನು ಅರ್ಥಪೂರ್ಣವಾಗಿ ಪ್ರತಿಪಾದಿಸಲಾಯಿತು. ಹೋಲಿ ರಿಡೀಮರ್ ಚರ್ಚ್ ಆವರಣದಿಂದ ಬೆಳ್ತಂಗಡಿ ಬಸ್ ನಿಲ್ದಾಣದವರೆಗೆ ಈ ಕಾರ್ಯಕ್ರಮ ನಡೆಯಿತು.

ಈ ಅಭಿಯಾನಕ್ಕೆ ವಂದನೀಯ ಸ್ವಾಮಿ ಫಾ.ವಾಲ್ಟರ್ ಡಿ’ಮೆಲ್ಲೋ, ಹೋಲಿ ರಿಡೀಮರ್ ಸ್ಕೂಲ್ ಪ್ರಿನ್ಸಿಪಾಲ್ ರೆ.ಫಾ.ಕ್ಲಿಫರ್ಡ್ ಪಿಂಟೋ, ಪ್ಯಾರಿಷ್ ಕೌನ್ಸಿಲ್ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಉದ್ಯಮಿ ಪ್ರೇಮ್ ರಾಜ್ ಸಿಕ್ವೇರಾ, ಸಿಸ್ಟರ್ ಜೆಸಿಂತಾ, ಮತ್ತು ಸಹೋದರ ಅಲ್ರಿಕ್ ಚಾಲನೆ ನೀಡಿದರು.

ಐಸಿವೈಎಂ ಆನಿಮೇಟರ್‌ಗಳಾದ ವಿಲ್ಸನ್ ಮೋನಿಸ್, ಡಾ.ಫ್ಲಾವಿಯಾ ಪೌಲ್ ಮತ್ತು ವೈಸಿಎಸ್ ಆನಿಮೇಟರ್‌ಗಳಾದ ಜೇಮ್ಸ್ ಬಾರ್ಬೋಜಾ ಮತ್ತು ಪ್ರೀತಾ ಅವರ ಮಾರ್ಗದರ್ಶನದಲ್ಲಿ, ಐಸಿವೈಎಂ ಅಧ್ಯಕ್ಷೆ ಅನ್ಸೆಲ್ಮಾ ಡಿಸೋಜಾ, ಐಸಿವೈಎಂ ಕಾರ್ಯದರ್ಶಿ ಅಜಯ್ ರೋಡ್ರಿಗಸ್, ವೈಸಿಎಸ್ ಕಾರ್ಯದರ್ಶಿ ಸ್ಟಾಲನ್ ಅವರ ನೇತೃತ್ವದಲ್ಲಿ, ಯುವಕರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

Exit mobile version