Site icon Suddi Belthangady

ಬೆಳ್ತಂಗಡಿ: ಕೆಸರ್ ಕಂಡೊಡು ಗೌಡರೆ ಗೌಜಿ-ಗಮ್ಮತ್- ಮೈರೋಳ್ತಡ್ಕ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಗೆ ವಿವಿಧ ಪ್ರಶಸ್ತಿ

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ, ಸ್ಪಂದನಾ ಸೇವಾ ಸಂಘ ಇವುಗಳ ಸಹಯೋಗದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಇದರ ನೇತೃತ್ವದಲ್ಲಿ ಆಗಸ್ಟ್ 18ರಂದು ವಾಣಿ ಶಿಕ್ಷಣ ಸಂಸ್ಥೆಗಳ ಹಿಂಭಾಗದ ಗದ್ದೆಯಲ್ಲಿ ನಡೆದ ಕೆಸರ್ ಕಂಡೊಡು ಗೌಡೆರೆ ಗೌಜಿ-ಗಮ್ಮತ್ ಕ್ರೀಡಾಕೂಟ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭದಲ್ಲಿ ಬಂದಾರು ಗ್ರಾಮದ ಮೈರೋಳ್ತಡ್ಕ ಗೌಡರ ಯಾನೆ ಒಕ್ಕಲಿಗರ ಗ್ರಾಮ ಸಮಿತಿಯ 10ನೇ ತರಗತಿ ಬಾಲಕರ ರಿಲೇ ತಂಡ ಪ್ರಥಮ, ಪುರುಷರ ವಾಲಿಬಾಲ್ ದ್ವಿತೀಯ, ಮಹಿಳೆಯರ ತ್ರೋಬಾಲ್ ದ್ವಿತೀಯ, ಹಗ್ಗಜಗ್ಗಾಟ ತೃತೀಯ ಸ್ಥಾನ ನಗದು ಜೊತೆಗೆ ಪ್ರಶಸ್ತಿ ಫಲಕ ಮುಡಿಗೇರಿಸಿಕೊಂಡಿದೆ.

Exit mobile version