Site icon Suddi Belthangady

ಶಾಸಕ ಹರೀಶ್ ಪೂಂಜರ ಹುಟ್ಟುಹಬ್ಬದ ಸಲುವಾಗಿ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ಮಂಡಲದ ವತಿಯಿಂದ ಸುಲ್ಕೇರಿ ಶ್ರೀರಾಮ ಶಿಶುಮಂದಿರ, ಹಿರಿಯ ಪ್ರಾಥಮಿಕ, ಪ್ರಾಢಶಾಲೆಗೆ ಭೇಟಿ

ಬೆಳ್ತಂಗಡಿ: ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಹುಟ್ಟುದಿನದ ಸಲುವಾಗಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ತಂಡ ಸುಲ್ಕೇರಿ ಶ್ರೀರಾಮ ಶಿಶುಮಂದಿರ, ಹಿರಿಯ ಪ್ರಾಥಮಿಕ, ಪ್ರಾಢಶಾಲೆಗೆ ಭೇಟಿ ನೀಡಿ ಶಾಲೆಯ ಶೈಕ್ಷಣಿಕ ಚಟುವಟಿಕೆ ವಿಚಾರದ ಬಗ್ಗೆ ಮಾತುಕತೆ ನಡೆಸಿ ಮಂಡಲ ಯುವ ಮೋರ್ಚಾ ಪದಾಧಿಕಾರಿಗಳ ಸಹಕಾರದೊಂದಿಗೆ ಸಂಗ್ರಹವಾದ ಧನಸಹಾಯವನ್ನು ಶ್ರೀರಾಮ ಶಾಲಾ ಟ್ರಸ್ಟ್ ಅಧ್ಯಕ್ಷರಾದ ರಾಜು ಪೂಜಾರಿ ಅವರ ಮೂಲಕ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಂಡಲ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ, ಕಾರ್ಯದರ್ಶಿಗಳಾದ ಗಿರೀಶ್ ಗೌಡ ಬಿ.ಕೆ ಬಂದಾರು, ಹರೀಶ್ ಗೌಡ ಸಬೋಲ್ಯ, ಶಾಲೆಯ ಟ್ರಸ್ಟಿ ಮೋಹನ್ ಅಂಡಿಂಜೆ ಉಪಸ್ಥಿತರಿದ್ದರು.

Exit mobile version