Site icon Suddi Belthangady

ರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌: ಬೆಸ್ಟ್ ಫೈಟರ್ ಆಗಿ ಸೆನ್ಸಾಯ್ ಸಿರಾಜ್ ಎಚ್

ಉಜಿರೆ: ಶೋರಿನ್ ರಿಯೊ ಕರಾಟೆ ಅಸೋಸಿಯೋಶನ್ ಮೂಡಬಿದಿರೆ ಇವರು ಆಯೋಜಿಸಿದ್ದ 2ನೇ ರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್‌ನ ಬ್ಲಾಕ್ ಬೆಲ್ಟ್ ಸೀನಿಯರ್ ವಿಭಾಗದಲ್ಲಿ ಗ್ರ್ಯಾಂಡ್ ಚಾಂಪಿಯನ್ ಟ್ರೋಫಿಯನ್ನು ಸೆನ್ಸಾಯ್ ಸಿರಾಜ್ ಎಚ್ ಇವರು ಪಡೆಯುವುದರ ಮೂಲಕ ಪಂದ್ಯಾಕೂಟದ ಬೆಸ್ಟ್ ಫೈಟರ್ ಆಗಿ ಹೊರಹೊಮ್ಮಿದ್ದಾರೆ.

ಇವರು ಉಜಿರೆಯ ಶಿಹಾನ್ ಅಬ್ದುಲ್ ರಹ್‌ಮಾನ್ ಇವರು ಶಿಷ್ಯರಾಗಿದ್ದು ಅವರೊಂದಿಗೆ ಸಹ ಶಿಕ್ಷಕರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು ಶಕ್ತಿನಗರ ನಿವಾಸಿಯಾದ ಹಸನಬ್ಬ ಹಾಗೂ ಅತೀಜಮ್ಮ ದಂಪತಿಯವರ ಪುತ್ರರಾಗಿರುತ್ತಾರೆ.

Exit mobile version