Site icon Suddi Belthangady

ಪುಂಜಾಲಕಟ್ಟೆ, ಚಾರ್ಮಾಡಿ ರಾ.ಹೆ.ಹಿತರಕ್ಷಣಾ ಸಮಿತಿ ವತಿಯಿಂದ ಜನಾಗ್ರಹ ಸಭೆ

ಬೆಳ್ತಂಗಡಿ: ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾಮಗಾರಿಯನ್ನು ಕಾಲಮಿತಿಯಲ್ಲಿ ವೈಜ್ಞಾನಿಕವಾಗಿ ನಿರ್ಮಿಸಿ ಪೂರ್ಣಗೊಳಿಸಬೇಕು ಮತ್ತು ಹೆದ್ದಾರಿ ಗುತ್ತಿಗೆಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗೊಳಪಡಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಜನಾಗ್ರಹ ಸಭೆ ಆ.19ರಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಂಭಾಗದಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷ ರಕ್ಷಿತ್ ಶಿವರಾಂ ಅಧ್ಯಕ್ಷ, ಸಮಿತಿಯ ಕಾರ್ಯದರ್ಶಿ ಬಿ.ಎಂ.ಭಟ್, ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಕಾಪಿಟ್ಟ ಮತ್ತು ನಾಗೇಶ್ ಗೌಡ, ಮಾಜಿ ಜಿ.ಪಂ. ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಪ.ಪಂ.ಸದಸ್ಯ ಜಗದೀಶ್ ಡಿ., ಸಿಐಟಿಯುನ ರಾಜ್ಯ ಜಿಲ್ಲಾ ಸದಸ್ಯ ಮುನೀರ್ ಕಾಟಿಪಳ್ಳ, ಪ್ರಮುಖರಾದ ಈಶ್ವರಿ, ಶ್ರೀನಿವಾಸ್ ಕಿಣಿ, ಶೇಖರ್ ಬಿ., ಉಮರ್ ಕುಂಞಿ, ಇಚ್ಚಿಲ ಸುಂದರ ಗೌಡ, ವಂದನಾ ಭಂಡಾರಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನೇರಪ್ರಸಾರನ್ನು ಸುದ್ದಿ ಯ್ಯೂಟ್ಯುಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು.

https://youtu.be/4Gq64fTOKB0

Exit mobile version