Site icon Suddi Belthangady

ಅರಸಿನಮಕ್ಕಿ: ಪ್ರಥಮ ಸುತ್ತಿನ ಗ್ರಾಮಸಭೆ

ಅರಸಿನಮಕ್ಕಿ: ಅರಸಿನಮಕ್ಕಿ ಗ್ರಾಮಪಂಚಾಯತ್ ನ 2024-25 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಆ.19ರಂದು ಪಂಚಾಯತ್ ಅಧ್ಯಕ್ಷೆ ಗಾಯತ್ರಿಯವರ ಅಧ್ಯಕ್ಷತೆಯಲ್ಲಿ ಹತ್ಯಡ್ಕ ಪ್ರಾ.ಕೃ.ಪ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.

ನೋಡೆಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಧನಂಜಯ ರವರು ಆಗಮಿಸಿದ್ದರು.

ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ ಎಸ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಜ್, ಪಂಚಾಯತ್ ಸದಸ್ಯರು. ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಾಡಗೀತೆಯನ್ನು ಭವಾನಿ, ಸ್ವಾಗತವನ್ನು ಪಿ ಡಿ ಒ ಜಯರಾಜ್, ಕಳೆದ ಬಾರಿಯ ಜಮಾ ಖರ್ಚು ವರದಿಯನ್ನು ಪಂಚಾಯತ್ ಸಿಬ್ಬಂಧಿ ವಿಂದ್ಯ ರವರು ನೆರವೇರಿಸಿದರು.

Exit mobile version