ಬಳಂಜ: ಬಳಂಜ ಗ್ರಾಮದ ಕಡೆಂಗಾಲು ನಿವಾಸಿ ಅಣ್ಣಿ ಪೂಜಾರಿ (70ವರ್ಷ) ರವರು ಆಗಸ್ಟ್ 18ರಂದು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಮೃತರು ದೈವದ ಪರಿಚಾರಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು ಎಲ್ಲರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು.ಮೃತರು ಓರ್ವ ಪುತ್ರಿ, ಮೂರು ಗಂಡು ಮಕ್ಕಳು, ಸೊಸೆಯಂದಿರನ್ನು ಅಗಲಿದ್ದಾರೆ.