Site icon Suddi Belthangady

ಕಕ್ಕಿಂಜೆ: ನೂರುಲ್ ಇಸ್ಲಾಮ್ ಮದರಸದಲ್ಲಿ ಸ್ವಾತಂತ್ರ್ಯೋತ್ಸವ

ಬೆಳ್ತಂಗಡಿ: ಸ್ವಾತಂತ್ರ್ಯದ ಪ್ರಯುಕ್ತ ನೂರುಲ್ ಇಸ್ಲಾಮ್ ಮದರಸ ಕಕ್ಕಿಂಜೆ ಇದರ ಸಭಾಂಗಣದಲ್ಲಿ ದ್ವಜಾರೋಹಣ ನಡೆಸಲಾಯಿತು. ಕಾರ್ಯಕ್ರಮಕ್ಕೆ ಎಸ್.ಕೆ.ಎಸ್.ಎಸ್.ಎಫ್ ಪ್ರಧಾನ ಕಾರ್ಯದರ್ಶಿ ನಾಸಿರ್ ಕಲ್ಲಗುಡ್ಡೆ ಸ್ವಾಗತಿಸಿದರು. ದ್ವಜಾರೋಹಣವನ್ನು ಎಂಜೆಎಂ ಸೇವಾ ಸಮೀತಿ ಅಧ್ಯಕ್ಷ ಇಬ್ರಾಹಿಂ ಅರೆಕ್ಕಲ್ ನೆರವೇರಿಸಿದರು. ಉಸ್ತಾದ್ ಅಬೂಬಕ್ಕರ್ ಸಿದ್ದೀಕ್ ಅಹ್ಮದ್ ಅಲ್ ಜಲಾಲಿ ಸಂದೇಶಭಾಷಣ ಮಾಡಿದರು. ತದ ನಂತರ ಉಸ್ತಾದ್ ರಫೀಕ್ ಅಝ್ಹರಿ ಶುಭಕೋರಿದರು.

2024ನೇ ಸಾಲಿನ ಈದ್ ಮಿಲಾದ್ ಕಾರ್ಯಕ್ರಮದ ಲೋಗೋ ಬಿಡುಗಡೆ ಮಾಡಲಾಯಿತು. ನೂರುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೊರಾಟ ಮತ್ತು ವೀರ ಸೇನಾನಿಗಳ ಕುರಿತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜಯಿಗಳಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಸಂದರ್ಭದಲ್ಲಿ ಎಂಜೆಎಂ ಸೇವಾ ಸಮಿತಿ, ಎಸ್.ಕೆ.ಎಸ್.ಎಸ್.ಎಫ್ ಕಕ್ಕಿಂಜೆ ಶಾಖೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಊರಿನ ಗಣ್ಯ ವ್ಯಕ್ತಿಗಳು, ನೂರುಲ್ ಇಸ್ಲಾಂ ಮದರಸ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಜಲಾಲಿಯ ದರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಂಜೆಎಂ ಸೇವಾ ಸಮಿತಿ ಕಾರ್ಯದರ್ಶಿ ಇಬ್ರಾಹಿಂ ಬೊಂಟ್ರಪಾಲ್ ವಂದಿಸಿದರು.

Exit mobile version