Site icon Suddi Belthangady

ಬುರೂಜ್ ಶಾಲೆಯಲ್ಲಿ ಸ್ವಾತಂತ್ರೋತ್ಸವದ ಸಂಭ್ರಮ

ಪುಂಜಾಲಕಟ್ಟೆ: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಮೂಡುಪಡುಕೋಡಿ ಇಲ್ಲಿ 78ನೇ ಸ್ವಾತಂತ್ರೋತ್ಸವ ಸಂಭ್ರಮವನ್ನು ಯತೀಶ್ ಶೆಟ್ಟಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಚೆನ್ನೈತ್ತೋಡಿ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿದರು.ಅಧ್ಯಕ್ಷತೆಯನ್ನು ಸಂಚಾಲಕರಾದ ಜನಾಬ್ ಶೇಖ್ ರಹ್ಮತ್ತುಲ್ಲಾ ವಹಿಸಿದ್ದರು. ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಜನಾಬ್ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.ಮುಖ್ಯ ಅತಿಥಿಯಾಗಿ ಇರ್ವತ್ತೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಶಾಂತ್ ಕುಮಾರ್ ಜೈನ್, ಸುಧೀಂದ್ರ ಶೆಟ್ಟಿ, ವಿಜಯ ಶೆಟ್ಟಿ, ಮಾಜಿ ಅಧ್ಯಕ್ಷರು ಶಂಕರ್ ಶೆಟ್ಟಿ ಬೆದ್ರಮಾರ್, ಗ್ರಾಮ ಪಂಚಾಯತ್ ಇರ್ವತ್ತೂರು ಪದವು ಸದಸ್ಯರು ಹಾಗೂ ಅಡ್ವಕೇಟ್ ಸುಚಿತ್ರಾ ಶೆಟ್ಟಿ, ಶಿಕ್ಷಕ -ರಕ್ಷಕ ಸಂಘ ಬುರೂಜ್ ಹೈಸ್ಕೂಲ್ ಮಾಜಿ ಅಧ್ಯಕ್ಷರು ದಿನೇಶ್ ಶೆಟ್ಟಿ , ಪ್ರಕಾಶ್ ಶೆಟ್ಟಿ ಮಧ್ವ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಯೂಸೂಫ್ ಸಯೀದ್ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯರಾದ ಜಯಶ್ರೀ ಬಿ.ಸಾಲ್ಯಾನ್ , ಶಿಕ್ಷಕ -ರಕ್ಷಕ ಸಂಘದ ಉಪಾಧ್ಯಕ್ಷೆ ಹಾಗೂ ಶಾಲಾ ಮೇಲ್ವಿಚಾರಕಿ ಎಸ್.ಪಿ ರಝೀಯಾ ಮತ್ತು ಶಾಲಾ ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿಗಳು, ಪೋಷಕರು, ಶಾಲಾ ನಾಯಕ ಮೊಹಮ್ಮದ್ ಆಸೀಂ ಮತ್ತು ಉಪನಾಯಕಿಯಾದ ಕುಮಾರಿ ಫಾತಿಮಾ ನೌಶಿಯಾ ಮತ್ತು ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಇರ್ವತ್ತೂರು ಪದವಿನಿಂದ ಶಾಲಾ ಆವರಣದವರೆಗೆ ಮೆರವಣಿಗೆ ಮೂಲಕ ಘೋಷವಾಕ್ಯಗಳನ್ನು ಮೊಳಗಿಸುತ್ತಾ ಬಂದು ರಾಷ್ಟ್ರಕ್ಕೆ ಗೌರವ ಸೂಚಿಸಿದರು. ತದನಂತರ ರಾಷ್ಟ್ರಗೀತೆ, ಕವಾಯತು ನೀಡುವುದರ ಮೂಲಕ ವಿದ್ಯಾರ್ಥಿಗಳು ಮನರಂಜನೆಯನ್ನು ನೀಡಿದರು.ನಂತರ ವೇದಿಕೆಯಲ್ಲಿ ಎಲ್ಲಾ ಗಣ್ಯರನ್ನು ಸ್ವಾಗತಿಸಿದ ಧ್ವಜಾರೋಹಣ ನೇರವೇರಿಸಿದ ಯತೀಶ್ ಶೆಟ್ಟಿ ಮಾತಾಡಿ ಮಕ್ಕಳು ದೇಶದ ಉತ್ತಮ ಪ್ರಜೆಯಾಗಬೇಕು ,ಬುರೂಜ್ ಶಾಲೆಯಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದೆ ಎಂದು ಎಲ್ಲ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.

ಎಲ್ಲಾ ತರಗತಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳಾದ ದೇಶಭಕ್ತಿ ಗೀತೆ, ರಾಷ್ಟನಾಯಕರುಗಳ ಬಗ್ಗೆ ಭಾಷಣ, ನೃತ್ಯ ಮಾಡಿ ಎಲ್ಲರ ಮನರಂಜಿಸಿದರು.ಬಂದಂತಹ ಅತಿಥಿಗಳನ್ನು ಮಶ್ಕೂರ ಹನಾ ಸ್ವಾಗತಿಸಿದರು.ಕುಮಾರಿ ಫಾತಿಮಾ ಅಫೀದಾ ವಂದಾನಾರ್ಪಣೆ ಗೈದರು.ಕಾರ್ಯಕ್ರಮವನ್ನು ಕುಮಾರಿ ಕಿಶ್ಫಾ ಝಬೀನ್ ನಿರೂಪಿಸಿದರು. ಇರ್ವತ್ತೂರಿನಲ್ಲಿ ಹೊಸದಾಗಿ ಸ್ಥಾಪಿತವಾದ ಯಶಸ್ವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್.ಪಿ.ಮೊಹಮ್ಮದ್ ರಫೀಕ್ ಹಾಗೂ ಸದಸ್ಯರು ಮಕ್ಕಳಿಗೆ ಸಿಹಿ ತಿಂಡಿ ಹಂಚಿದರು. ಶಾಲಾ ಅಭಿಮಾನದಿಂದ ಯತೀಶ್ ಶೆಟ್ಟಿ ಎಸ್.ಪಿ.ಮೊಹಮ್ಮದ್ ರಶೀದ್ ಇರ್ವತ್ತೂರು ಮೊಹಮ್ಮದ್ ಇಕ್ಬಾಲ್ ಇರ್ವತ್ತೂರು, ಉಸ್ಮಾನ್ ಮಾವಿನ ಕಟ್ಟೆ ಇವರು ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ನೀಡಿದ್ದರು.

Exit mobile version