Site icon Suddi Belthangady

ಬೆಳ್ತಂಗಡಿ: ಆನ್ಸ್ ಕ್ಲಬ್ ನೂತನ ಅಧ್ಯಕ್ಷೆಯಾಗಿ ಗಾಯತ್ರಿ ಶ್ರೀಧರ್, ಕಾರ್ಯದರ್ಶಿಯಾಗಿ ಡಾ.ವಿನಯಾ ಕಿಶೋರ್ ಅಧಿಕಾರ ಸ್ವೀಕಾರ

ಉಜಿರೆ: ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಂಗ ಸಂಸ್ಥೆಯಾದ ರೋಟರಿ ಆನ್ಸ್ ಕ್ಲಬ್ ಇದರ ನೂತನ ಪದಾಧಿಕಾರಿಗಳ‌ ಪದಗ್ರಹಣ ಸಮಾರಂಭ ಆ.15ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದಲ್ಲಿ ನಡೆಯಿತು.ನೂತನ ಅಧ್ಯಕ್ಷೆಯಾಗಿ ಗಾಯತ್ರಿ ಶ್ರೀಧರ್ ಅಧಿಕಾರ ಸ್ವೀಕರಿಸಿದರೆ ಕಾರ್ಯದರ್ಶಿಯಾಗಿ ಡಾ.ವಿನಯಾ ಕಿಶೋರ್ ಅವರು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ರೊ.ಪೂರನ್ ವರ್ಮ ಸ್ವಾಗತಿಸಿದರು. ಪದ ಪ್ರಧಾನ ಅಧಿಕಾರಿಯಾಗಿ ರೊ.ಸೋನಿಯಾ ವರ್ಮ ನೂತನ ಪದಾಧಿಕಾರಿಗಳಿಗೆ ಅಧಿಕಾರ ನೀಡಿದರು. ಮುಖ್ಯ ಅತಿಥಿಯಾಗಿ ಮೂಡಬಿದ್ರೆಯ ನೋಟರಿ ವಕೀಲೆ ಶ್ವೇತ ಜೈನ್ ಅವರು ಮಾತನಾಡಿ ಮಹಿಳೆಯರು ತಮ್ಮಲ್ಲಿ ನಾಯಕತ್ವ ಗುಣ ಹಾಗೂ ಸಮಾಜ ಸೇವೆ ಮಾಡುವಂತಹ ಮನೋಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.

ನಿರ್ಗಮನ ಅಧ್ಯಕ್ಷೆ ಡಾ.ಅನಿತಾ ದಯಾಕರ್ ಅವರು ತಮ್ಮ ಮನದಾಳದ ಮಾತನ್ನು ಆಡಿದರು.ನೂತನ ಅಧ್ಯಕ್ಷೆ ಗಾಯತ್ರಿ ಶ್ರೀಧರ್ ಅವರು ಮಾತನಾಡಿ ಆನ್ಸ್ ಕ್ಕಬ್ ನ ಅಧ್ಯಕ್ಷೆಯಾಗಿ ತನ್ನನ್ನು ಆಯ್ಕೆ ಮಾಡಿದ ರೋಟರಿ ಕ್ಲಬ್ ನ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.ಇತರ ಸ್ಥಾನಗಳಿಗೆ ಆಯ್ಕೆಯಾದ ಪದಾಧಿಕಾರಿಗಳು ತಮ್ಮ ಅಧಿಕಾರ ಸ್ವೀಕರಿಸಿದರು ಹಾಗೂ ಕಳೆದ ಹದಿಮೂರು ವರ್ಷಗಳಲ್ಲಿ ಆನ್ಸ್ ಕ್ಲಬ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಸದಸ್ಯೆಯರನ್ನು ಅಭಿನಂದಿಸಲಾಯಿತು.ಇದೇ ಸಂಧರ್ಭದಲ್ಲಿ 2024ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುವ ಡಿ.ಆರ್.ಎಫ್.ಓ ಕಮಲ ಹಾಗೂ ಯುವ ಪ್ರತಿಭಾನ್ವಿತ ಕಲಾವಿದೆ ಕುಮಾರಿ ಸಿಂಚನಾ ಅವರನ್ನು ಗೌರವಿಸಲಾಯಿತು. ಹಾಗೂ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿನಿಯೋರ್ವಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ವೇದಿಕೆಯಲ್ಲಿ ರೋಟರಿ ಕ್ಲಬ್ ನ ಕಾರ್ಯದರ್ಶಿ ಸಂದೇಶ್ ರಾವ್ ಉಪಸ್ಥಿತರಿದ್ದರು.ಕಾರ್ಯಕ್ರಮವು ಕುಮಾರಿ ಇಂಚರಾ ಕಾರಂತ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು.ರಶ್ಮಿ ಪಟವರ್ಧನ್ ಹಾಗೂ ವೈಷ್ಣವಿ‌ ಪ್ರಭು ಅವರು ಕಾರ್ಯಕ್ರಮವನ್ನು ನಿರೂಪಿಸಿ, ಸುಜಾತ ಅಣ್ಣಿ ಪೂಜಾರಿ, ದೀಪ್ತಿ ಹೆಗ್ಡೆ , ಸ್ಮಿತಾ ಪ್ರಶಾಂತ್ ಜೈನ್, ಮಮತಾ ಶ್ರೀನಾಥ್, ಶೋಭಾ ಗೋಪಾಲಕೃಷ್ಣ, ರಶ್ಮಿ ಆದರ್ಶ್ ಕಾರಂತ್ ಅವರು ಸಹಕರಿಸಿದರು.ನೂತನ ಕಾರ್ಯದರ್ಶಿ ಡಾ.ವಿನಯಾ ಕಿಶೋರ್ ವಂದಿಸಿದರು.

Exit mobile version