Site icon Suddi Belthangady

ಶಿಬಾಜೆ: ಪೆರ್ಲ ಶಾಲೆಗೆ ಸ್ವಾತಂತ್ರ್ಯ ದಿನದ ಅಂಗವಾಗಿ ಹಣ್ಣಿನ ಗಿಡ ವಿತರಣೆ

ಶಿಬಾಜೆ: ಪೆರ್ಲ ದ.ಕ.ಜಿ.ಪ.ಉ.ಹಿ. ಪ್ರಾ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾರಾಯಣ ಗೌಡ ಖಂಡಿಗ ದ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಿಬಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಪೆರ್ಲ ಶಾಲಾ ಹಳೇ ವಿದ್ಯಾರ್ಥಿ ತುಳುನಾಡ್ ನರ್ಸರಿ ಮಾಲಕ ಮಾಧವ ಗೌಡ ರವರು ಶಾಲೆಗೆ ವಿವಿಧ ಹಣ್ಣಿನ ಗಿಡಗಳನ್ನು ವಿತರಿಸಿದರು.

ಈ ಸಂಧರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ, ಹತ್ಯಡ್ಕ ಪ್ರಾಕೃ ಪ ಸ ಸಂಘದ ನಿವೃತ ಕಾರ್ಯನಿರ್ವಾಹನಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್ ಉಪಸ್ಥಿತರಿದ್ದರು.

Exit mobile version