ಉಜಿರೆ: ಶ್ರೀ ಧ. ಮಂ. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಭಾನುಪ್ರಕಾಶ್ ಬಿ.ಇ. ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿ ನೀಡಿ ಗೌರವಿಸಿದೆ.
ಡಾ.ಎ.ಜಯಕುಮಾರ್ ಶೆಟ್ಟಿ ಮಾರ್ಗದರ್ಶನದಲ್ಲಿ ಭಾನುಪ್ರಕಾಶ್ ಅವರು ‘ತೆರಿಗೆದಾರರ ಹೂಡಿಕೆ ನಡವಳಿಕೆಗಳು’ ಎಂಬ ವಿಷಯದ ಮೇಲೆ ನಡೆಸಿದ ಪ್ರೌಢ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಲಭಿಸಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಭುವನಹಳ್ಳಿಯ ಮೂಲದವರಾದ ಭಾನುಪ್ರಕಾಶ್ ಅವರು ಕಳೆದ ಹದಿನೈದು ವರ್ಷಗಳಿಂದ ಉಜಿರೆ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜಯಮ್ಮ ಮತ್ತು ಈಶ್ವರ್ ದಂಪತಿಯ ಪುತ್ರ ಭಾನುಪ್ರಕಾಶ್ ಅವರು ಎಸ್.ಡಿ.ಎಂ. ತೆರಿಗೆ ಸಲಹಾ ಕೇಂದ್ರದಲ್ಲಿ ತೆರಿಗೆ ಸಲಹೆಗಾರರಾಗಿ ಹಾಗೂ ಎನ್.ಸಿ.ಸಿ. ಆರ್ಮಿ ವಿಭಾಗದ ಅಧಿಕಾರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿ ಭಾನುಪ್ರಕಾಶ್ ಅವರು ಬರೆದಿರುವ ಹದಿನೈದಕ್ಕೂ ಅಧಿಕ ಪುಸ್ತಕಗಳು ಪ್ರಕಟಗೊಂಡಿವೆ.